ಚಿಕ್ಕಮಗಳೂರು : ಅಂಬೇಡ್ಕರ್ ತತ್ವ- ಸಿದ್ಧಾಂತ ವನ್ನು ಒಳಗೊಂಡಿರುವ ಬಿಎಸ್ಪಿ ಪಕ್ಷ ರಾಜ್ಯ ಹಾಗೂ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಮುನ್ನೆಡೆದರೆ ಮಾತ್ರ ಸಮಸಮಾಜ ನಿರ್ಮಿಸುವ ಮೂಲಕ ಬಡತನವನ್ನು ಶಾಶ್ವತವಾಗಿ ನಿರ್ಮೂಲನೆಗೊಳಿಸಲು ಸಾಧ್ಯ ಎಂದು ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್ ಹೇಳಿದರು.
ನಗರದ ಜಿಲ್ಲಾ ಬಿ.ಎಸ್.ಪಿ. ಕಚೇರಿಯಲ್ಲಿ ಏರ್ಪಡಿಸಿದ್ಧ ಆರ್ಥಿಕ ಸಹಯೋಗ ದಿವಸ್, ಜನಕಲ್ಯಾಣ ದಿನ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಪಕ್ಷವನ್ನು ಸಂಘಟಿಸುವ ಹಾಗೂ ಚಳುವಳಿಯನ್ನು ರೂಪಿಸುವ ಸಲುವಾಗಿ ಜನರಿಂದ ದೇಣಿಗೆ ರೂಪದಲ್ಲಿ ಹಣಪಡೆಯಲಾಗುತ್ತಿದೆ. ಅದರಂತೆ ಇಂದಿನಿಂದ ಮುಂದಿನ ಜನವರಿ 15 ರವರೆಗೆ ಹೆಚ್ಚಿನ ಮೊತ್ತದಲ್ಲಿ ದೇಣಿಗೆಯನ್ನು ಸಂಗ್ರಹಿಸಿ ರಾಜ್ಯ ಸಮಿತಿಗೆ ಹಸ್ತಾಂತರಿಸಿ ಚಳುವಳಿ ಹಾಗೂ ಇನ್ನಿತರೆ ಕಾರ್ಯಚಟುವಟಿಕೆಗೆ ಬಳಸಿಕೊಳ್ಳಲಾಗುತ್ತದೆ ಎಂದರು.
ದೇಶದ ರಾಜಕೀಯ ಪಕ್ಷಗಳ ಇತಿಹಾಸದಲ್ಲಿ ಬಿಎಸ್ಪಿ ಹೊರತಾಗಿ ಬಹುತೇಕ ಎಲ್ಲಾ ಪಕ್ಷಗಳು ಕಾರ್ಪೋರೇಟ್ ಕಂಪನಿಗಳಿಂದ ದೇಣಿಗೆ ಪಡೆದು ಚುನಾವಣೆ ಎದುರಿಸಿವೆ ಹಾಗೂ ಚುನಾವಣಾ ಆಯೋಗವು ಛೀಮಾರಿಯು ಹಾಕಿದೆ. ಆದರೆ ಬಿಎಸ್ಪಿ ಎಲ್ಲದಕ್ಕಿಂತ ಭಿನ್ನವಾಗಿ ಕಾರ್ಯಕರ್ತರ ನೆರವಿನಿಂದ ಹೊರ ಹೊಮ್ಮಿ ಇಂದಿಗೂ ಉತ್ತಮ ಪಕ್ಷವಾಗಿದೆ ಎಂದು ಹೇಳಿದರು.
PublicNext
14/11/2024 07:25 pm