ಬೆಂಗಳೂರು : ಕಾರು ಕೆಟ್ಟು ನಿಂತಿರುವ ಪರಿಣಾಮ ಕೆ ಆರ್ ಮಾರುಕಟ್ಟೆ ಫ್ಲೈ ಓವರ್ ಮೇಲೆ ಕಿ.ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ. ಮಾರ್ಕೆಟ್ ಮೇಲ್ಸುತುವೆಯಿಂದ ಎರಡು ಕಿ.ಮೀಟರ್ಗೂ ಹೆಚ್ಚು ಜಾಮ್ ಆಗಿದ್ದು ವಾಹನ ಮೂವ್ ಮಾಡಲಾಗದೆ ಬಿಸಿಲಲ್ಲಿ ಸಿಟಿ ಮಂದಿ ಹೈರಾಣಗಿದ್ದಾರೆ.
ಗಂಟೆಗಳಿಂದಲೂ ಟ್ರಾಫಿಕ್ ನಲ್ಲಿ ಸಿಲುಕಿರುವ ವಾಹನ ಸವಾರರು ಎಷ್ಟೇ ಪ್ರಯತ್ನ ಪಟ್ಟರೂ ಆಮೆಗತಿಯಲ್ಲಿ ವಾಹನಗಳು ಸಾಗ್ತಿದೆ.. ರಸ್ತೆಯಲ್ಲಿ ಗಾಡಿ ಕೆಟ್ಟು ಹೋದ್ರೆ ಮಾಲೀಕರೆ ಜವಾಬ್ದಾರರು.. ಈ ಹಿಂದೆಯೇ ಸಂಚಾರಿ ವಿಭಾಗ ಹೇಳಿದ್ರು ಜನ ತಲೆಕೆಡಿಸಿಕೊಂಡ ಹಾಗೇ ಕಾಣಿಸ್ತಾ ಇಲ್ಲ..
ಅಲ್ಲಲ್ಲಿ ಮತ್ತೇ ಗಾಡಿಗಳು ರಸ್ತೆಯಲ್ಲಿ ಕೈ ಕೊಟ್ಟು ಟ್ರಾಫಿಕ್ ಜಾಮ್ ಆಗುವ ಚಿತ್ರಣ ಕಾಮನ್ ಆಗಿದೆ. ಈ ಹಿನ್ನಲೆ ಟ್ರಾಫಿಕ್ ನಿಯಂತ್ರಿಸಲು ಪೊಲೀಸರಿಂದ ಹರಸಾಹಸ ಪಡಬೇಕಾಯಿತು.
PublicNext
14/11/2024 12:31 pm