ಬ್ರಹ್ಮಾವರ: ಜಿಲ್ಲೆಯಲ್ಲಿ ಅತೀ ಹೆಚ್ಚು 688 ವಿದ್ಯಾರ್ಥಿಗಳನ್ನು ಹೊಂದಿರುವ ಬ್ರಹ್ಮಾವರ ಸರಕಾರಿ ಪ್ರೌಢಶಾಲೆಯ ಶಾಲಾ ವಾರ್ಷಿಕೋತ್ಸವದಂದು ವಿದ್ಯಾರ್ಥಿಗಳಿಗೆ ಅನೇಕ ಸೃಜನಶೀಲ ಕಲೆ ಮತ್ತು ಸಂಸ್ಕೃತಿ ವಿಜ್ಞಾನದ ಕುರಿತ 17 ರೀತಿಯ ನಾನಾ ಸ್ಪರ್ಧೆಗಳನ್ನು ಆಯೋಜಿಲಾಗಿತ್ತು.
ಸೌಂದರ್ಯ ಮತ್ತು ತಂತ್ರಜ್ಞಾನ ವಿಭಾಗದಲ್ಲಿ 8ರಿಂದ 10ನೇ ತರಗತಿಯ ಹುಡುಗಿಯರಿಂದ ಕೇಶ ವಿನ್ಯಾಸ ಮತ್ತು ಹುಡುಗರ ವಾಟರ್ ಲೆವೆಲ್ ಇಂಡಿಕೇಟ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಜ್ಞಾನ ಮತ್ತು ಕೌಶಲ್ಯ ಅನಾವರಣಗೊಂಡು ಅತೀ ಹೆಚ್ಚು ಮೆಚ್ಚುಗೆ ಗಳಿಸಿತು.
ಶಿಕ್ಷಕಿಯರಾದ ಉಷಾಲತಾ ಮತ್ತು ದೀಕ್ಷಿತಾ ಅವರ ಮಾರ್ಗದರ್ಶನದಲ್ಲಿ ಹುಡುಗಿಯರ ನಾನಾ ರೀತಿಯ ಕೇಶ ಅಲಂಕಾರ ಮತ್ತು ಮೆರುಗು ನೀಡುವ ಅಲಂಕಾರಿಕ ಹೂವಿನ ಶೃಂಗಾರ ಒಂದಕ್ಕಿಂತ ಒಂದು ವಿಭಿನ್ನವಾಗಿತ್ತು. ಗಣಪತಿಯವರಿಂದ ತರಬೇತು ಪಡೆದ ಹುಡುಗರು ನಿರ್ಮಿಸಿದ ನೀರಿನ ಟಾಂಕಿ ತುಂಬಿದಾಗ ಮೊಳಗುವ ಸೈರನ್ ತಾಂತ್ರಿಕತೆ ಬೆರಗುಗೊಳಿಸಿತು.
ಧಾನ್ಯಗಳಿಂದ ಹೂವು ಮತ್ತು ಎಲೆಗಳ ರಂಗೋಲಿ, ಮುಖವಾಡ, ಹೂಗುಚ್ಛ, ಹಿಡಿಸೂಡಿ ತಯಾರಿ, ಗಣಿತ- ವಿಜ್ಞಾನ ಮಾದರಿ ಸೇರಿದಂತೆ ವಿವಿಧ ಸೃಜನಶೀಲತೆ ಹೊರಹೊಮ್ಮಿಸುವ ಬದುಕಿನ ಕಲೆಗಳ ನೈಜ ಅನುಭವವನ್ನು ಸರಕಾರಿ ಶಾಲಾ ವಿದ್ಯಾರ್ಥಿಗಳು ಮಾಡಿ ತೋರಿಸುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದ್ದಾರೆ.
-ಶಿವರಾಮ ಆಚಾರ್ಯ, ಪಬ್ಲಿಕ್ ನೆಕ್ಸ್ಟ್
PublicNext
13/11/2024 05:51 pm