ಫೆರೀಸ್ (ಜಯಿಂಟ್) ವೀಲ್ ಆಡಲು ಹೋಗಿ ಕೂದಲು ಬುರುಡೆ ಸ್ವಮೇತ ಕಿತ್ತುಬಂದಿರುವ ಘಟನೆ ಉತ್ತರ ಪ್ರದೇಶದ ಕನೌಜ್ನಲ್ಲಿ ನಡೆದಿದೆ.ಜಾತ್ರೆಯೊಂದರಲ್ಲಿ 13 ವರ್ಷದ ಅನುರಾಧಾ ಕಥೇರಿಯಾ ಎಂಬ ಹುಡುಗಿಯ ಕೂದಲು ಉಯ್ಯಾಲೆಯ ರೋಲರ್ನಲ್ಲಿ ಸಿಕ್ಕಿಹಾಕಿಕೊಂಡು ಸಂಪೂರ್ಣ ನೆತ್ತಿ ಕಿತ್ತುಹೋಗಿದೆ.ಇದರಿಂದ ಆಕೆಯ ತಲೆಗೆ ಗಾಯವಾಗಿ ರಕ್ತಸ್ರಾವದಿಂದ ಸ್ಥಳದಲ್ಲೇ ಮೂರ್ಛೆ ಹೋಗಿದ್ದಾಳೆ.ನೋಡಲು ಈ ವೀಡಿಯೋ ಅತೀ ಭಯಂಕರವಾಗಿದೆ. ಆಕೆಗೆ ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋದ ಪಿಜಿಐಗೆ ವರ್ಗಾಯಿಸಲಾಗಿದೆ.
PublicNext
12/11/2024 08:05 pm