ದಾವಣಗೆರೆ: ನಗರದ ಎಂಸಿಸಿ ಬಿ ಬ್ಲಾಕಿನಲ್ಲಿ ಮನೆಯ ಗೇಟ್ ತೆಗೆದು ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಯಮಹಾ ಆರ್.ಎಕ್ಸ್. 100 ಬೈಕ್ ನ್ನು ಖದೀಮರು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಎಂಸಿಸಿ ಬಿ ಬ್ಲಾಕ್ 8ನೇ ಮೇನ್, 2ನೇ ಕ್ರಾಸ್ ನಿವಾಸಿ ಗೌತಮ್ ಪಾಟೀಲ್ ಎಂಬುವವರ ಕೆ.ಎ. 17 ಹೆಚ್ 7444 ನಂಬರ್ ನ ಬೈಕನ್ನು ಕದ್ದಿದ್ದಾರೆ. ನಡೆದುಕೊಂಡು ಬಂದ ಕಳ್ಳರು ಮನೆಯ ಗೇಟ್ ತೆಗೆದು ಬೈಕನ್ನು ಹೊರಗಡೆ ಎಳೆದುಕೊಂಡು ಬಂದು ನಂತರ ತಳ್ಳಿಕೊಂಡು ಹೋಗಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಬಾಯ್ಸ್ ಹಾಸ್ಟೆಲ್ ನಲ್ಲಿರುವ ಅಗ್ರೀ ಕ್ಯಾ ಅಂಗಡಿ ಮುಂಭಾಗ ನಿಲ್ಲಿಸಿದ್ದ ಮತ್ತೊಂದು ಆರ್.ಎಕ್ಸ್. 100 ಬೈಕ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
PublicNext
12/11/2024 08:02 am