ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ದಕ್ಷಿಣ ಕಾಶಿ ಶ್ರೀ ಕಲಶೇಶ್ವರ ಸನ್ನಿಧಾನದಲ್ಲಿ ನಾಳೆ ಗಿರಿಜಾ ಕಲ್ಯಾಣೋತ್ಸವ

ಚಿಕ್ಕಮಗಳೂರು : ದಕ್ಷಿಣ ಕಾಶಿ ಅಗಸ್ತ್ಯ ಕ್ಷೇತ್ರ ಶ್ರೀ ಕಲಶೇಶ್ವರ ಸ್ವಾಮಿಯವರಿಗೆ ನಾಳೆ ಗಿರಿಜಾಕಲ್ಯಾಣೋತ್ಸವ ನಡೆಯಲಿದ್ದು, ದೇವಾಲಯದಲ್ಲಿ ತಯಾರಿ ಜೋರಾಗಿ ನಡೆಯುತ್ತಿದೆ. ಹೀಗಾಗಿ ಇದು ಧ್ವಜಾರೋಹಣ ಮಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಯಿತು. ನವಂಬರ್ 16ರ ವರೆಗೆ ಪೂಜಾ ಕಾರ್ಯಗಳು ನಡೆಯಲಿವೆ.

ಇಂದು ಧ್ವಜಾರೋಹಣದ ನಂತರ ಗ್ರಾಮಸ್ಥರಿಂದ ಹಸಿರುವಾಣಿ ಸಮರ್ಪಣೆ, ಕಾರ್ತಿಕ ದೀಪೋತ್ಸವ, ಸುಪ್ರದಕ್ಷಿಣೆ ಸೇವೆ ನಡೆಯುತ್ತಿದೆ. ನಾಳೆ ರುದ್ರಾಭಿಷೇಕ, ರಂಗಪೂಜೆ ನಡೆಯಲಿದ್ದು ರಾತ್ರಿ 3 ಗಂಟೆಗೆ ಗಿರಿಜಾ ಕಲ್ಯಾಣೋತ್ಸವ ಜರುಗಲಿದೆ. ನ.13 ರಂದು ಮಹಾಪೂಜೆ, ರಾತ್ರಿ ಚಿಕ್ಕ ರಥೋತ್ಸವ.ನ. 14 ರಂದು ಬಿಂದು ಮಾಧವ ದೇವರ ಆಗಮನ, ರಾತ್ರಿ ಡೋಲೋತ್ಸವ, ಬಿಂದು ಮಾಧವ ದೇವರ ಸಮಾಗಮ. ನ.15 ರಂದು ಕುಂಕುಮೋತ್ಸವ, ರುದ್ರತೀರ್ಥದಲ್ಲಿ ಅವಭೃಥ ಸ್ನಾನ, ರಾತ್ರಿ ಧ್ವಜಾವರೋಹಣ, ನ. 16 ರಂದು ಮಹಾ ಸಂಪ್ರೋಕ್ಷಣೆ, ಧಾತ್ರಿ ಹೋಮ ವಶಿಷ್ಟಾಶ್ರಮಕ್ಕೆ ಆಗಮನ, ಸಂತರ್ಪಣೆ ರಾತ್ರಿ ತ್ರಿಪುರೋತ್ಸವ, ಕೃತಿಕಾ ದೀಪೋತ್ಸವ ಹರಿಹರ ಸಮಾಗಮದೊಂದಿಗೆ 8 ದಿನಗಳ ಕಾಲ ನಡೆಯುವ ಗಿರಿಜಾಕಲ್ಯಾಣ ಮಹೋತ್ಸವ ಧಾರ್ಮಿಕ ಕಾರ್ಯಕ್ರಮಕ್ಕೆ ತೆರೆಬೀಳಲಿದೆ. ಹೀಗಾಗಿ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಲು ನಾನಾ ಭಾಗಗಳಿಂದ ಭಕ್ತಾದಿಗಳು ಆಗಮಿಸುತ್ತಿದ್ದಾರೆ.

Edited By : PublicNext Desk
PublicNext

PublicNext

11/11/2024 07:19 pm

Cinque Terre

19.75 K

Cinque Terre

0

ಸಂಬಂಧಿತ ಸುದ್ದಿ