ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ದತ್ತಮಾಲಾ ಅಭಿಯಾನಕ್ಕೆ ಕ್ಷಣಗಣನೆ- 1700ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ನಾಳೆ ಶ್ರೀರಾಮ ಸೇನೆಯಿಂದ ವತಿಯಿಂದ ನಡೆಯಲಿರುವ ದತ್ತ ಮಾಲಾ ಅಭಿಯಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಾಗಿ ನಗರ ಹಾಗೂ ದತ್ತಪೀಠದ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ.

ನಾಳೆ ರಾಜ್ಯದ ವಿವಿಧ ಭಾಗದಿಂದ ಆಗಮಿಸುವ ದತ್ತಮಾಲಾಧಾರಿಗಳು ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ. ಹೀಗಾಗಿ ತಾಲೂಕಿನೆಲ್ಲೆಡೆ ಖಾಕಿ ಹದ್ದಿನ ಕಣ್ಣಿಟ್ಟಿದ್ದು, ಚಿಕ್ಕಮಗಳೂರು ನಗರ ಹಾಗೂ ದತ್ತ ಪೀಠದಲ್ಲಿ 1700ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.

ಓರ್ವ ಎಸ್ಪಿ, ಓರ್ವ ಅಡಿಶನಲ್ ಎಸ್ಪಿ, 6 ಡಿವೈಎಸ್ಪಿ, 15 ಸರ್ಕಲ್ ಇನ್ಸ್ಪೆಕ್ಟರ್ ಗಳು, 100 ಮಂದಿ ಪಿಎಸ್ಐಗಳು, 1500 ಪೊಲೀಸರು, 8 ಕೆಎಸ್ಆರ್ಪಿ,11 ಡಿಎಆರ್ ತುಕಡಿ, 2 ಕ್ಯೂಆರ್ ಟಿ ಟೀಂ ನಿಯೋಜಿಸಲಾಗಿದೆ. ಅಲ್ಲದೇ ದತ್ತಪೀಠ ಮಾರ್ಗದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ಈ ಬಾರಿ ಹೆಚ್ಚಿನ ಡ್ರೋನ್ ಕ್ಯಾಮೆರಾಗಳು ಕಣ್ಣಿಡಲಿವೆ. ಮುಂಜಾಗ್ರತಾ ಕ್ರಮವಾಗಿ ಬಾಟಲಿಗಳಿಗೆ ಪೆಟ್ರೋಲ್ ತುಂಬಿ ಕೊಡದಂತೆ ಬಂಕ್ ಮಾಲೀಕರಿಗೆ ಸೂಚನೆ ನೀಡಲಾಗಿದೆ.

Edited By : Manjunath H D
PublicNext

PublicNext

09/11/2024 10:45 pm

Cinque Terre

32.35 K

Cinque Terre

0

ಸಂಬಂಧಿತ ಸುದ್ದಿ