ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಟ್ಟೆಗೆರೆ ಗ್ರಾಮದಲ್ಲಿ 300 ವರ್ಷಗಳ ಇತಿಹಾಸವಿರುವ ಉಣ್ಣಕ್ಕಿ ಉತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಕಾರ್ತಿಕ ಮಾಸದಲ್ಲಿ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಊರಿನ ಹಿರಿಯರು ಹೇಳುವ ಪ್ರಕಾರ ಹಿಂದೆ ಈ ಹಬ್ಬವನ್ನು ದನ ಕಾಯುವ ಹುಡುಗರು ಗೋಮಾಳ ಜಾಗದಲ್ಲಿ ಮಣ್ಣಿನ ಗುಡ್ಡೆಯನ್ನು ಗೋಪುರ ರೂಪದಲ್ಲಿ ಮಾಡಿ ಪೂಜೆ ಸಲ್ಲಿಸುತ್ತಿದ್ದರಂತೆ.
ಈ ಆಚರಣೆ ಮಾಡುವುದರಿಂದ ಗೋವುಗಳ ಆರೋಗ್ಯ ಹಾಗೂ ಊರಿನ ಸಮೃದ್ಧಿ ಹೆಚ್ಚಾಗುವುದು ಎಂಬ ನಂಬಿಕೆಯೂ ಇದೇ. ಈ ಉಣ್ಣಕ್ಕಿ ತಾಯಿಯ ಗೋಪುರದ ಮುಂದೆ ಕಷ್ಟಗಳನ್ನು ಹಂಚಿಕೊಂಡರೆ ಅವುಗಳನ್ನು ಶೀಘ್ರದಲ್ಲಿ ಬಗೆಹರಿಸುವ ವಿಶೇಷವಾದ ಶಕ್ತಿ ತಾಯಿಗೆ ಇದೆ ಎಂದು ಸ್ಥಳೀಯರು ನಂಬಿದ್ದಾರೆ. ಕಾರ್ತಿಕ ಮಾಸದ ಹುಣ್ಣಿಮೆ ದಿನ ಉಣ್ಣಕ್ಕಿ ತಾಯಿಗೆ ಪೂಜೆ ಮಾಡಿ ಅನ್ನದಾನ ಸ್ವೀಕರಿಸಿ ಹೋಗುವ ಪದ್ಧತಿ ಇಂದಿಗೂ ಜೀವಂತವಿದೆ. ಹಲವು ತಲೆಮಾರುಗಳಿಂದ ಬಂದಿರುವ ಇಂತಹ ಅನೇಕ ಆಚರಣೆಗಳನ್ನು ಮಲೆನಾಡಿಗರು ಮುಂದುವರೆಸಿಕೊಂಡು ಹೋಗುತ್ತಿರುವುದು ಸಂತಸವೇ ಸರಿ
Kshetra Samachara
13/11/2024 01:00 pm