ಚಿಕ್ಕಮಗಳೂರು: ಶ್ರೀರಾಮ ಸೇನೆ ವತಿಯಿಂದ ದತ್ತಮಾಲಾ ಅಭಿಯಾನದ ಧಾರ್ಮಿಕ ಸಭೆಯು ನಗರದ ಬಸವಹಳ್ಳಿಯ ಶಂಕರ ಮಠದ ಮುಂಭಾಗದಲ್ಲಿ ಆರಂಭಗೊಂಡಿದೆ.
ಧಾರ್ಮಿಕ ಸಭೆಗೆ ಜ್ಯೋತಿ ಬೆಳಗಿಸುವ ಮೂಲಕ ಶ್ರೀರಾಮ ಸೇನೆ ರಾಷ್ಟ್ರಧ್ಯಕ್ಷ ಪ್ರಮೋದ್ ಮುತಾಲಿಕ್, ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಸೇರಿದಂತೆ ಸಾಧು ಸಂತರು ಚಾಲನೆ ನೀಡಿದ್ದಾರೆ. ದತ್ತಾಮಾಲಾ ಅಭಿಯಾನಕ್ಕೆ ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ದತ್ತ ಭಕ್ತರು ಆಗಮಿಸಿದ್ದಾರೆ.
ಇನ್ನು ಬರೋಬ್ಬರಿ ಎರಡು ದಶಕಗಳ ನಂತರ ಶ್ರೀರಾಮ ಸೇನೆಯ ದತ್ತಾಮಾಲಾ ಅಭಿಯಾನದ ಧಾರ್ಮಿಕ ವೇದಿಕೆಯನ್ನು ಸಿ.ಟಿ ರವಿ ಹಂಚಿಕೊಂಡಿದ್ದಾರೆ. ಎರಡು ದಶಕಗಳ ಹಿಂದೆ ವಿಶ್ವ ಹಿಂದೂ ಪರಿಷತ್ ಹಾಗೂ ಶ್ರೀರಾಮ ಸೇನೆ ದತ್ತ ಪೀಠದ ಪರವಾಗಿ ಪ್ರತ್ಯೇಕ ಹೋರಾಟ ನಡೆಸುತ್ತಿದ್ದವು. ಇದೀಗ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಶ್ರೀರಾಮ ಸೇನೆಯ ದತ್ತಮಾಲಾ ಅಭಿಯಾನದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಒಗ್ಗಟ್ಟಿನ ಮಂತ್ರವನ್ನು ಜಪಿಸಿದ್ದಾರೆ.
PublicNext
10/11/2024 03:14 pm