ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಳಸ: ದಕ್ಷಿಣ ಕಾಶಿ ಶ್ರೀ ಕಲಶೇಶ್ವರ ಸನ್ನಿಧಾನದಲ್ಲಿ ಇಂದಿನಿಂದ ಗಿರಿಜಾಕಲ್ಯಾಣೋತ್ಸವ ಪೂಜಾ ಕಾರ್ಯಗಳು ಆರಂಭ

ಕಳಸ: ದಕ್ಷಿಣ ಕಾಶಿ ಅಗಸ್ತ್ಯ ಕ್ಷೇತ್ರ ಶ್ರೀ ಕಲಶೇಶ್ವರ ಸ್ವಾಮಿಯವರಿಗೆ ನವಂಬರ್ 12 ಮಂಗಳವಾರ ರಂದು ಗಿರಿಜಾಕಲ್ಯಾಣೋತ್ಸವ ನಡೆಯಲಿದ್ದು, ಇಂದಿನಿಂದ ನವಂಬರ್ 16ರ ವರೆಗೆ ಪೂಜಾ ಕಾರ್ಯಗಳು ನಡೆಯಲಿವೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರೇಮಲತಾ ತಿಳಿಸಿದ್ದಾರೆ.

ಇಂದು ಗಣಪತಿ ಪೂಜೆ ಅಂಕುರಾರ್ಪಣೆ, ನ. 10 ರಂದು ಕೌತುಕೋತ್ಸವ, ನ 11 ರಂದು ಧ್ವಜಾರೋಹಣ, ಗ್ರಾಮಸ್ಥರಿಂದ ಹಸಿರುವಾಣಿ ಸಮರ್ಪಣೆ, ಕಾರ್ತಿಕ ದೀಪೋತ್ಸವ, ಸುಪ್ರದಕ್ಷಿಣೆ ಸೇವೆ. ನ. 12 ರಂದು ಶತವಾರ ರುದ್ರಾಭಿಷೇಕ, ರಂಗಪೂಜೆ, ರಾತ್ರಿ 3 ಗಂಟೆಗೆ ಗಿರಿಜಾ ಕಲ್ಯಾಣೋತ್ಸವ. ನ.13 ರಂದು ಮಹಾಪೂಜೆ, ರಾತ್ರಿ ಚಿಕ್ಕ ರಥೋತ್ಸವ.ನ. 14 ರಂದು ಬಿಂದು ಮಾಧವ ದೇವರ ಆಗಮನ, ರಾತ್ರಿ ಡೋಲೋತ್ಸವ, ಬಿಂದು ಮಾಧವ ದೇವರ ಸಮಾಗಮ.

ನ 15 ರಂದು ಕುಂಕುಮೋತ್ಸವ, ರುದ್ರತೀರ್ಥದಲ್ಲಿ ಅವಭೃಥ ಸ್ನಾನ, ರಾತ್ರಿ ಧ್ವಜಾವರೋಹಣ, ನ 16 ರಂದು ಮಹಾ ಸಂಪ್ರೋಕ್ಷಣೆ, ಧಾತ್ರಿ ಹೋಮ ವಶಿಷ್ಟಾಶ್ರಮಕ್ಕೆ ಆಗಮನ, ಸಂತರ್ಪಣೆ ರಾತ್ರಿ ತ್ರಿಪುರೋತ್ಸವ, ಕೃತಿಕಾ ದೀಪೋತ್ಸವ ಹರಿಹರ ಸಮಾಗಮದೊಂದಿಗೆ 8 ದಿನಗಳ ಕಾಲ ನಡೆಯುವ ಗಿರಿಜಾಕಲ್ಯಾಣ ಮಹೋತ್ಸವ ಧಾರ್ಮಿಕ ಕಾರ್ಯಕ್ರಮಕ್ಕೆ ತೆರೆಬೀಳಲಿದೆ ಎಂದು ಪ್ರೇಮಲತಾ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

09/11/2024 05:48 pm

Cinque Terre

560

Cinque Terre

0

ಸಂಬಂಧಿತ ಸುದ್ದಿ