ಕುಂದಗೋಳ : ಮನೆ ಮಂದಿಯಲ್ಲಾ ಕೂತು ಉಣ್ಣುವ ಆಚರಣೆಗಳೇ ದೂರವಾದ ದಿನಗಳಲ್ಲಿ ಹಳ್ಳಿಗಳು ಮಾತ್ರ ಇಂದಿಗೂ ಆ ಸಂಪ್ರದಾಯವನ್ನು ಇನ್ನೂ ಜೀವಂತವಾಗಿಟ್ಟಿವೆ.
ಹೌದು ! ಇದಕ್ಕೆ ಸಾಕ್ಷಿಯಾಗಿರುವುದೇ ಆಲಿಕೇರಿ ಆಚರಣೆ, ದೀಪಾವಳಿ ನಂತರದಲ್ಲಿ ಗೌರಿ ಹುಣ್ಣಿಮೆ ಆಗಮನಕ್ಕೂ ಮುನ್ನ ಕೆಲ ನಗರ ಪ್ರದೇಶ ಸೇರಿದಂತೆ ಹಳ್ಳಿ ಹಳ್ಳಿಗಳಲ್ಲಿ ಮನೆ ಮೇಲ್ಛಾವಣಿ, ಟೇರಸ್ ಮೇಲೆ ಈಶ್ವರ ಪ್ರತಿಷ್ಠಾಪನೆ ಮಾಡಿ ದೀಪ ಬೆಳಗಿಸಿ ಪೂಜೆ ಕೈಗೊಂಡು ಮಂತ್ರ ಪಠಿಸಿ ವಿವಿಧ ಖಾಧ್ಯಗಳ ಅಡುಗೆ ಮಾಡಿ ಮನೆ ಮಂದಿಯೆಲ್ಲಾ ಕೂತು 5 ದಿನ ಈ ಆಲಿಕೇರಿ ಆಚರಣೆ ಮಾಡುತ್ತಾರೆ.
ಗೌರಿ ಹುಣ್ಣಿಮೆ ಆಗಮನದ ಮುನ್ನ ಚಂದಿರನ ಹುಣ್ಣಿಮೆ ಬೆಳಕಿನಲ್ಲಿ ನಿತ್ಯ ರಾತ್ರಿ ಈ ಆಚರಣೆ ನಡೆಯುತ್ತದೆ.
ವಿಶೇಷವಾಗಿ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಮುತ್ತಯ್ಯನಮಠ, ಶಿಡಗಂಟಿ ಮತ್ತು ಪಾಣಿಗಟ್ಟಿ ಬಂಧುಗಳು ಆಲಿಕೇರಿ ಆಚರಣೆಯನ್ನು ಕೈಗೊಂಡು ಸಂಭ್ರಮದಿಂದ ಭೋಜನ ಸವಿದ ದೃಶ್ಯಗಳು ಇದೀಗ ಕಣ್ಮರೆ ಆಗುತ್ತಿರುವ ಗ್ರಾಮೀಣ ಭಾಗದ ಸಂಸ್ಕೃತಿಯ ಉಳಿವನ್ನು ಸಾರುತ್ತಿವೆ.
ಹಳ್ಳಿಗಳಲ್ಲಿ ಆಲಿಕೇರಿ ಆಚರಣೆ ಇನ್ನೂ ಜೀವಂತವಾಗಿರುವುದು ಗ್ರಾಮೀಣ ಭಾಗದ ಸೊಗಡನ್ನು ಸಾರುತ್ತಿದೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
08/11/2024 01:11 pm