ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ತುಳಸಿ ವಿವಾಹ, ಮನೆಯಲ್ಲೇ ಆಧ್ಯಾತ್ಮಿಕ ಕಂಪು ಸೃಷ್ಟಿಸಿದ ಕುಟುಂಬ ವರ್ಗ

ಕುಂದಗೋಳ : ಎಲ್ಲೆಡೆ ತುಳಸಿ ಲಗ್ನದ ಸಂಭ್ರಮ ಜೋರಿರುವಾಗಲೇ ಇಲ್ಲೊಬ್ಬ ರೈತ, ಸಂಭ್ರಮ ದುಪ್ಪಟ್ಟು ಮಾಡುವ ಜಾನಪದ ಕಾರ್ಯಕ್ರಮ ಹಮ್ಮಿಕೊಂಡು ಹಳ್ಳಿಗಳಲ್ಲಿ ಆಧ್ಯಾತ್ಮಿಕ ನೆಲೆ ಕಲ್ಪಿಸಿದ್ದಾರೆ.

ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಮಾನಪ್ಪ ಬಡಿಗೇರ ಎಂಬ ರೈತ ಕಳೆದ ಹಲವು ವರ್ಷಗಳಿಂದ ತುಳಸಿ ವಿವಾಹವನ್ನೂ ಆಚರಿಸುತ್ತಿದ್ದು, ಇವರ ಆಚರಣೆ ರಾತ್ರಿ ಇಡೀ ಭಜನಾ ಪದ, ತತ್ವ ರಸಾನುಭವ, ಪ್ರವಚನ ಕಾರ್ಯಕ್ರಮ ಹೊಂದಿರುತ್ತದೆ.

ಮುಖ್ಯವಾಗಿ ವಿವಿಧ ಜಂಗಮರಿಂದ ಪ್ರವಚನ, ನುರಿತ ಭಜನಾ ಸಂಘಗಳಿಂದ ಭಜನೆ ಸಕಲ ವಾದ್ಯ ಮೇಳಗಳ ಜೊತೆ ಜರುಗುತ್ತದೆ.

ಇನ್ನೂ ವಿಶೇಷ ಎಂದರೇ ಲಕ್ಷ್ಮೀ, ಸರಸ್ವತಿ, ವೀರಭದ್ರೇಶ್ವರ ದೇವರು ಸೇರಿದಂತೆ ವಿಷ್ಣುವಿನ ಪೋಟೋಗೆ ವಿಶೇಷ ಪೂಜೆ, ಪ್ರಸಾದ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯುತ್ತದೆ.

ಒಟ್ಟಾರೆಯಾಗಿ ಮಾನಪ್ಪ ಬಡಿಗೇರ ಕೈಗೊಳ್ಳುವ ತುಳಸಿ ವಿವಾಹ ಇದೀಗ ಭಕ್ತಿ ರಸಾನುಭವ , ಪ್ರವಚನ, ಕಾರ್ಯಕ್ರಮವಾಗಿದ್ದು, ಗುಡೇನಕಟ್ಟಿ ಗ್ರಾಮ ಸೇರಿದಂತೆ ತಾಲೂಕಿನ ಜನರ ಮನ ಗೆದ್ದಿದೆ.

Edited By : Manjunath H D
Kshetra Samachara

Kshetra Samachara

13/11/2024 11:00 pm

Cinque Terre

10.59 K

Cinque Terre

0

ಸಂಬಂಧಿತ ಸುದ್ದಿ