ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವದ ಧೀಮಂತ ಸನ್ಮಾನ ಕಾರ್ಯಕ್ರಮದಲ್ಲಿ ಸಾಧಕ ಪತ್ರಕರ್ತರು ಸೇರಿದಂತೆ 93ಜನರಿಗೆ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಅದ್ದೂರಿಯಾಗಿ ಕಾರ್ಯಕ್ರಮ ಆಚರಣೆ ಮಾಡಲಾಯಿತು.
ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಏರ್ಪಡಿಸಿದ್ದ ಧೀಮಂತ ಸನ್ಮಾನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ 93 ಸಾಧಕರನ್ನು ಗೌರವಿಸುವ ಮೂಲಕ ಸ್ಮರಣೀಯಗೊಳಿಸಲಾಯಿತು. ಹೌದು.. ಕೆಂಪು-ಹಳದಿ ಧ್ವಜ, ಬಣ್ಣದ ಶಾಲು, ಪೇಟಗಳಿಂದ ಸಂಪೂರ್ಣ ಕನ್ನಡಮಯ ವಾತಾವರಣದಲ್ಲಿ ಇಲ್ಲಿಯ ಇಂದಿರಾ ಗಾಜಿನಮನೆಯಲ್ಲಿ ಆಯೋಜಿಸಿದ್ದ ಅದ್ದೂರಿ ಸಮಾರಂಭದಲ್ಲಿ ವೈದ್ಯಕೀಯ, ಕೈಗಾರಿಕೆ, ಕ್ರೀಡೆ, ಸಂಶೋಧನೆ, ಪತ್ರಿಕೋದ್ಯಮ, ಸಾಹಿತ್ಯ, ಕೃಷಿ, ರಂಗಕಲೆ, ಜಾನಪದ ಹೀಗೆ ಸುಮಾರು 20 ಕ್ಷೇತ್ರದಲ್ಲಿ ಸಾಧನೆ ಮಾಡಿ ಮಹಾನಗರದ ಅಭಿವೃದ್ಧಿಗೆ ಕೊಡುಗೆ ನೀಡಿದವರನ್ನು ಗುರುತಿಸಿ ಧೀಮಂತ ಸನ್ಮಾನ ನೀಡಲಾಯಿತು.
ಪತ್ರಕರ್ತರಾದ ಜೆ ಅಬ್ಬಾಸ್ ಮುಲ್ಲಾ, ಗುರುರಾಜ ಹೂಗಾರ, ಆನಂದಕುಮಾರ ಅಂಗಡಿ, ಶಿವಶಂಕರ ಕಂಠಿ, ಶಿವಾಜಿ ಲಾತೂರಕರ, ಪ್ರಸನ್ನ ಕರ್ಪೂರ ಸೇರಿದಂತೆ 93 ಜನ ಸಾಧಕರಿಗೆ ಧೀಮಂತ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
Kshetra Samachara
13/11/2024 12:41 pm