ಕುಂದಗೋಳ: 22 ವರ್ಷ ದೇಶ ಸೇವೆ ಸಲ್ಲಿಸಿ ಮರಳಿ ತಮ್ಮೂರಿಗೆ ಆಗಮಿಸಿದ ಯೋಧನಿಗೆ ಚಕ್ಕಡಿ ಮೆರವಣಿಗೆ ಮೂಲಕ ಸ್ವಾಗತ ಕೋರಿ ಅಭಿನಂದನೆ ಸಲ್ಲಿಸಿದ ಮಹತ್ ಕಾರ್ಯಕ್ಕೆ ಕುಂದಗೋಳ ಪಟ್ಟಣ ಸಾಕ್ಷಿಯಾಗಿದೆ.
ಗಡಿ ಭದ್ರತಾ ಪಡೆ (ಬಿಎಸ್‌ಎಫ್)ನಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಕುಂದಗೋಳ ಪಟ್ಟಣಕ್ಕೆ ಆಗಮಿಸಿದ ಯೋಧ ವಿಠ್ಠಲ ಕೃಷ್ಣಾಜಿ ಜಾಧವ್ ಅವರನ್ನು ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರ ಮತ್ತು ಮಹಾಂತ ಶಿವಯೋಗಿಗಳ ನೇತೃತ್ವದಲ್ಲಿ ಚಕ್ಕಡಿ ಮೆರವಣಿಗೆಯಲ್ಲಿ ಸ್ವಾಗತ ಕೋರಲಾಯಿತು.
ಬಳಿಕ ಕುಂದಗೋಳ ಪಟ್ಟಣ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ವೇದಿಕೆ ಕಾರ್ಯಕ್ರಮ ಏರ್ಪಡಿಸಿ ಯೋಧನ ತಾಯಿಗೆ ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರು ಗೌರವ ಸಲ್ಲಿಸಿ ಯೋಧ ಮತ್ತು ರೈತರ ಸೇವೆಯನ್ನು ಸ್ಮರಿಸಿದರು.
ಬಳಿಕ ಯೋಧನ ಸ್ನೇಹಿತರು ಚಿಲಿಪಿಲಿ ಬಳಗದ ವತಿಯಿಂದ ಯೋಧನನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿ ಸ್ಮರಣಿಕೆ ನೀಡಿ ಗೌರವಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾಜಿ ಯೋಧರಿಗೂ ಸನ್ಮಾನ ಗೌರವ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಯೋಧ ವಿಠ್ಠಲ ಕೃಷ್ಣಾಜಿ ಜಾಧವ್ ಕುಟುಂಬಸ್ಥರು ಮತ್ತು ಗ್ರಾಮದ ಹಿರಿಯರು ಉಪಸ್ಥಿತರಿದ್ದರು ಚಕ್ಕಡಿ ಮೆರವಣಿಗೆಯುದ್ದಕ್ಕೂ ಯೋಧನಿಗೆ ಪುಷ್ಪಗಳ ಸುರಿಮಳೆ ನಡೆಯಿತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/11/2024 02:55 pm