ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ 2024ರ ಅಧ್ಯಕ್ಷೀಯ ರೇಸ್‌ನಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಫ್ಲೋರಿಡಾದ ಪಾಮ್ ಬೀಚ್ ಕೌಂಟಿ ಕನ್ವೆನ್ಷನ್ ಸೆಂಟರ್‌ನಲ್ಲಿ ಉತ್ಸಾಹಭರಿತ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಈ ಗೆಲುವನ್ನು "ಅಮೆರಿಕದ ಜನರ ಅಭೂತಪೂರ್ವ ಮತ್ತು ಶಕ್ತಿಯುತ ಜನಾದೇಶ" ಎಂದು ಬಣ್ಣಿಸಿದರು. ಇದೇ ವೇಳೆ ಟ್ರಂಪ್ ಅವರು ಅಮೆರಿಕದ ಉಪಾಧ್ಯಕ್ಷರನ್ನಾಗಿ JD ವ್ಯಾನ್ಸ್ ಅವರನ್ನು ಘೋಷಣೆ ಮಾಡಿದ್ದಾರೆ.
ಜೆಡಿ ವ್ಯಾನ್ಸ್ ಅವರು ಭಾರತೀಯ ಮೂಲಕ ಉಷಾ ವಾನ್ಸ್ ಅವರ ಪತಿ ಆಗಿದ್ದಾರೆ. ಮೂಲತಃ ಉಷಾ ಚಿಲುಕುರಿ ಎಂದು ಹೆಸರಿಸಲ್ಪಟ್ಟ ಉಷಾ ವಾನ್ಸ್ ಭಾರತೀಯ ವಲಸಿಗರ ಮಗಳು. ಅವರು ತನ್ನ ಬಾಲ್ಯವನ್ನು ಸ್ಯಾನ್ ಫ್ರಾನ್ಸಿಸ್ಕೋ ಪ್ರದೇಶದಲ್ಲಿ ಕಳೆದಳು. ಅವರು ಯೇಲ್ ವಿಶ್ವವಿದ್ಯಾನಿಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಮಾಸ್ಟರ್ ಆಫ್ ಫಿಲಾಸಫಿಯನ್ನು ಹೊಂದಿದ್ದಾರೆ.
ವಿಶೇಷವೆಂದರೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಉಷಾ ಅವರ ದೊಡ್ಡಪ್ಪ ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು. ಉಷಾ ಚಿಲ್ಕುರಿ ಹಾಗೂ ಜೆಡಿ ವಾನ್ಸ್ ಮೊದಲು ಭೇಟಿಯಾಗಿದ್ದು, ಯಾಲೆಯ ಲಾ ಸ್ಕೂಲ್‌ನಲ್ಲಿ. 2014ರಲ್ಲಿ ಮದುವೆಯಾದ ಇವರಿಗೆ ಮೂವರು ಮಕ್ಕಳಿದ್ದಾರೆ. ಆರು ವರ್ಷದ ಇವನ್, 4 ವರ್ಷದ ವಿವೇಕ್ ಹಾಗೂ 2 ವರ್ಷದ ಮೀರಾಬೆಲ್ ಎಂಬ ಎರಡು ಗಂಡು ಒಂದು ಹೆಣ್ಣು ಮಗುವನ್ನು ದಂಪತಿ ಹೊಂದಿದ್ದಾರೆ.
PublicNext
06/11/2024 03:37 pm