ಕೇರಳ : ಪ್ರಿಯಾಂಕಾ ಬೈಪೋಲಾರ್ ಡಿಸಾರ್ಡರ್ ನಿಂದ ಬಳಲುತ್ತಿದ್ದಾರೆ ಎಂದು ಬಿಜೆಪಿ ಮಾಜಿ ನಾಯಕ ಸುಬ್ರಮಣಿಯನ್ ಸ್ವಾಮಿ ಮಾಡಿರುವ ಪೋಸ್ಟ್ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.
ಸದ್ಯ ವಯನಾಡಿನ ಉಪಚುನಾವಣೆಯ ಪ್ರಚಾರದಲ್ಲಿ ಬ್ಯುಸಿಯಾಗಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಸಾರ್ವಜನಿಕ ಪ್ರತಿನಿಧಿಯಾಗಲು ಅನರ್ಹರು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಈ ಬೈಪೋಲಾರ್ ಡಿಸಾರ್ಡರ್ ಅಂದ್ರೆ, ಮನಸ್ಥಿತಿಯಲ್ಲಿ , ಮೂಡ್ ಸ್ವಿಂಗ್ಸ್ ನಲ್ಲಿ ಅತಿಯಾದ ವ್ಯತ್ಯಾಸಗಳಾಗುವುದು,ಇದ್ದಕ್ಕಿದಂತೆ ಶಾಂತವಾಗಿದ್ದ ವ್ಯಕ್ತಿ ಕೋಪಗೊಳ್ಳುವುದು,ಅಥವಾ ಖಿನ್ನತೆಗೆ ಜಾರುವುದು,ಈ ರೀತಿಯ ಅನಿಯಮಿತ ನಡವಳಿಕೆ ಪ್ರಿಯಾಂಕಾ ಗಾಂಧಿಗೆ ಇದೆ ಎಂದಿದ್ದಾರೆ. ಹೀಗಾಗಿ ಪ್ರಿಯಾಂಕಾ ವಾದ್ರಾ ಸಂಸದ ಸ್ಥಾನ ನಿಭಾಯಿಸಲು ಅಥವಾ ಜನಪ್ರಧಿನಿಧಿ ಆಗಲು ಯೋಗ್ಯವಲ್ಲ ಎಂದು ಪರಿಗಣಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ಹೀಗಾಗಿ ಕೇರಳದ ವಯನಾಡಿನ ಮತದಾರರು ಈ ಅಂಶಗಳನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು ಮತ್ತು ಬಿಜೆಪಿ ಅಭ್ಯರ್ಥಿಗೆ ಮತ ಹಾಕುವುದು ಲೇಸು ಎಂದು ಸಲಹೆ ನೀಡಿದ್ದಾರೆ.
PublicNext
06/11/2024 04:33 pm