ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ಲಂಚಾವತಾರ ನಡೆಯುತ್ತಿದೆ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ದಿನೇಶ್ ಗುಂಡೂರಾವ್ , ಅಬಕಾರಿ ಇಲಾಖೆಯಯಲ್ಲಿ ಏನಾದರೂ ಆರೋಪಗಳಿದ್ದರೆ, ವೈನ್ ಮರ್ಚೆಂಟ್ ಅಸೋಸಿಯೇಷನ್ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ದೂರು ಕೊಡಲಿ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ವೈನ್ ಮರ್ಚೆಂಟ್ ಅವರು ಭ್ರಷ್ಟಾಚಾರದ ಬಗ್ಗೆ ಸ್ಪಷ್ಟ ಮಾಹಿತಿ ಕೊಡ್ತಿಲ್ಲ. ಹಿಂದೆ ನಡೀತಾ ಇತ್ತು, ಅದೇ ರೀತಿಯಲ್ಲಿ ಈಗಲೂ ನಡೀತಾ ಇದೆ ಅಂತಾ ಹೇಳಿದ್ದಾರೆ.ಒಂದು ವೇಳೆ ಭ್ರಷ್ಟಾಚಾರ ನಡೆಯುತ್ತಿದ್ದರೆ ಮದ್ಯ ಮಾರಾಟಗಾರರು ಸಿಎಂ ಭೇಟಿ ಮಾಡಿ ದೂರು ನೀಡಲಿ. ಅದರ ಹೊರತಾಗಿ ಈ ರೀತಿ ಬಹಿರಂಗವಾಗಿ ಆರೋಪ ಮಾಡುವುದು, ಹೇಳಿಕೆ ನೀಡುವುದು ಸರಿಯಲ್ಲ, ಯಾರು ವಸೂಲಿ ಮಾಡ್ತಿದ್ದಾರೆ ಎಂಬುದನ್ನು ಹೇಳಬೇಕು.
ಯಾವ ವೈನ್ ಮರ್ಚೆಂಟ್ ಬಳಿ ಲಂಚ ಬೇಡಿಕೆ ಇಟ್ಟಿದ್ದಾರೆ ಎಂಬುದನ್ನು ಹೇಳಬೇಕಲ್ವಾ ಎಂದು ಪ್ರಶ್ನಿಸಿದರು.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಚುನಾವಣೆಯ ಮೇಲೆ ಪರಿಣಾಮ ಬೀರುತ್ತಾ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಚನ್ನಪಟ್ಟಣ ಎಲೆಕ್ಷನ್ ಮೇಲೆ ಯಾವ ಪರಿಣಾಮವೂ ಬೀರಲ್ಲ. ನಾವು ಮಾಡಿರುವ ಅಭಿವೃದ್ದಿ ನೋಡಿ ಜನ ವೋಟ್ ಹಾಕ್ತಾರೆ ಎಂದರು.
PublicNext
06/11/2024 06:48 pm