ಹುಬ್ಬಳ್ಳಿ : ಸಿಟಿಯಲ್ಲಿ ಹಾವನ್ನು ನೋಡೊದೇ ಅಪರೂಪ, ಅಂತದರಲ್ಲಿ ಮೇನ್ ಸೀಟಿ ಅದರಲ್ಲೂ BRTS ರಸ್ತೆ ಮೇಲೆ, ಜಾಲರಿ ಮೇಲೆ ಬೃಹತ್ತಾದ ಹೆಬ್ಬಾವೊಂದು ಕಂಡು ಬಂದಿದ್ದು, ಜನರಲ್ಲಿ ಅಚ್ಚರಿಯ ಆತಂಕ ಸೃಷ್ಟಿ ಮಾಡಿರು ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಕಾಲೇಜು ಮುಂಬಾಗದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಸುಮಾರು 10 ರಿಂದ 12 ಪೂಟ್ ಇರುವಂತ ಹೆಬ್ಬಾವು ಶನಿವಾರ ರಾತ್ರಿ ಬಿಆರ್‌ಟಿಎಸ್ ರಸ್ತೆಯಲ್ಲಿ ಸಂಚರಿಸುತ್ತಿತ್ತು, ಅದನ್ನು ನೋಡಿದ ಸುನೀಲ ಎಂಬ ಯುವಕ, ಬಸ್ ತಡೆದಿದ್ದಾನೆ. ಅಷ್ಟೇ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಡಿಸಿಪಿ ಮಹಲಿಂಗ ನಂದಗಾವಿ ಅವರನ್ನು ತಡೆದು ತೋರಿಸಿದ್ದಾನೆ. ಕೂಡಲೇ ಡಿಸಿಪಿ ನಂದಗಾವಿ ಅವರು ಎಲ್ಲ ವಾಹನವನ್ನು ತಡೆದು ಹಾವು ರಕ್ಷಕನನ್ನು ಕರೆಯಿಸಿ, ಹೆಬ್ಬಾವನ್ನು ರಕ್ಷಣೆ ಮಾಡಿಸಿದ್ದಾರೆ.
ಈ ಹೆಬ್ಬಾವು ಜನನಿಬೀಡ ಸ್ಥಳಕ್ಕೆ ಹೇಗೆ ಬಂತು ಎನ್ನುವುದೇ ಎಲ್ಲತ ಆತಂಕ ಡಿಸಿಪಿ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/11/2024 02:16 pm