ಕಲಘಟಗಿ : ಕಲಘಟಗಿ ತಾಲ್ಲೂಕಿನಲ್ಲಿ ಕೆಲವು ದಿನಗಳಿಂದ ಮುಂಜಾನೆ ಮಂಜಿನ ವಾತಾವರಣ ಸೃಷ್ಟಿಯಾಗುತ್ತಿದ್ದು, ವಾಹನ ಸಂಚಾರರಿಗೆ ರಸ್ತೆ ಕಾಣದೆ ಇರುವ ದೃಶ್ಯ ಕಂಡು ಬಂದಿತು.
ಕಲಘಟಗಿ ತಾಲ್ಲೂಕಿನಲ್ಲಿ ಹಾಗೂ ಸುತ್ತ ಮುತ್ತಲಿನ ಹೊಲಗದ್ದೆಗಳಲ್ಲಿ ಮಂಜು ಆವರಿಸಿದ್ದು ಒಂದು ಕ್ಷಣ ಕಲಘಟಗಿ ಎಂಬುದು ಕಾಶ್ಮೀರ ನೋಡಿದಂತೆ ಭಾಸವಾಗಿತ್ತು.
ಅರೆ ಮಲೆನಾಡು ಎಂದು ಕರೆಯಲ್ಪಡುವ ಕಲಘಟಗಿ ತಾಲ್ಲೂಕಿನಲ್ಲಿ ಈ ರೀತಿಯಾದ ಹಲವು ಪ್ರಕೃತಿ ಸೌಂದರ್ಯವನ್ನು ನೋಡಲು ಸಿಗೋದು ವಿಶೇಷವಾಗಿದೆ. ಚಳಿಗಾಲದ ಈ ಸಂಧರ್ಭದಲ್ಲಿ ಮಂಜು ಹೆಚ್ಚಾಗಿ ಬರುವ ಕಾರಣ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ನಿಧಾನವಾಗಿ ಸಂಚರಿಸಬೇಕಾಗಿದೆ.
ಮಂಜಿನಲ್ಲಿ ಮುಂದೆ ಬರುವ ವಾಹನಗಳು ಕಾಣದೆ ಅಪಘಾತಗಳು ಸಂಭವಿಸಬಹುದು. ಆದ್ದರಿಂದ ವಾಹನ ಚಾಲಕರು ಎಚ್ಚರಿಕೆಯಿಂದ ಸಂಚಾರ ಮಾಡಿ ಎಂದು ನಿಮ್ಮ ಪಬ್ಲಿಕ್ ನೆಕ್ಸ್ಟ್ ಕಳಕಳಿಯಾಗಿದೆ.
ವರದಿ : ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್, ಕಲಘಟಗಿ
Kshetra Samachara
24/12/2024 12:47 pm