ಬೆಂಗಳೂರು: ರಾಜ್ಯದಲ್ಲಿ ಈಗ ಬಿಜಿಪಿ ವಿರೋಧ ಪಕ್ಷದ ಸ್ಥಾನದಲ್ಲಿದೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆಯಾದ ಬಳಿಕ ರಾಜ್ಯ ಬಿಜೆಪಿಗೆ ಕೇಂದ್ರ ಬಿಜೆಪಿ ಹೈಕಮಾಂಡ್ ಹೊಸ ಸಾರಥಿಯನ್ನಾಗಿ ಮಾಜಿ ಮುಖ್ಯಮಂತ್ರಿ ರಾಜ್ಯ ಬಿಜೆಪಿಯ ಕಟ್ಟಾಳು ಬಿ.ಎಸ್ ಯಡಿಯೂರಪ್ಪನವರ ಪುತ್ರ ಬಿ.ವೈ ವಿಜಯೇಂದ್ರ ಅವರನ್ನ ರಾಜ್ಯ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡ್ತು.
ಯುವಕರಿದ್ದಾರೆ ಮತ್ತು ಜಾತಿ ಲೆಕ್ಕಾಚಾರ ಹಾಗೂ ಯಡಿಯೂರಪ್ಪನವರ ಶಕ್ತಿ ಹೇಗೆ ಅಳೆದು ತೂಗಿ ಲೆಕ್ಕಾಚಾರ ಹಾಕಿ ವಿಜಯೇಂದ್ರಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕ್ತು. ಆದ್ರೆ ವಿಜಯೇಂದ್ರ ಆಯ್ಕೆ ರಾಜ್ಯ ಬಿಜೆಪಿಯ ಕೆಲ ನಾಯಕರಿಗೆ ಆಶ್ಚರ್ಯ ತಂದಿದೆ, ಕೇಂದ್ರ ಬಿಜೆಪಿ ಮತ್ತೆ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದೆ ಎಂದೆಲ್ಲಾ ಪಿಸು ಪಿಸು ಚರ್ಚೆ ನಡೆಸಿದ್ರು ಕೆಲವರು ಹೈಕಮಾಂಡ್ ಹೇಳಿದ ಮೇಲೆ ಮುಗೀತು ಎಂದು ವಿಜಯೇಂದ್ರಗೆ ಸಾಥ್ ನೀಡುತ್ತಿದ್ದಾರೆ. ಆದ್ರೆ ವಿಜಯೇಂದ್ರಗೆ ಆಯ್ಕೆಯಾದಗಿನಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಂಡ್ ಟೀಂ ಪುಲ್ ರೆಬಲ್ ಆಗಿದೆ. ವಿಜಯೇಂದ್ರಗೆ ಆಯ್ಕೆ ಬಗ್ಗೆ ನೇರವಾಗಿ ಯತ್ನಾಳ್ ವಿರೋಧಿಸುತ್ತಾ ಬಂದಿದ್ದಾರೆ. ಯತ್ನಾಳ್ ಕೇವಲ ವಿಜಯೇಂದ್ರ ಅಷ್ಟೇ ಅಲ್ದೇ ಯಡಿಯೂರಪ್ಪನವರ ವಿರುದ್ಧವೂ ನೇರವಾಗಿ ಆರೋಪ ಮಾಡ್ತಾ ಬರುತ್ತಿದ್ದಾರೆ ಹೀಗೆ ಬಿಜೆಪಿ ಶಾಸಕನಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರನ ವಿರುದ್ಧ ಬಹಿರಂಗವಾಗಿ ಟೀಕೆ ಮಾಡುತ್ತಿರೋದು ಬಿಜೆಪಿಗೆ ಭಾರಿ ಮುಜುಗರಕ್ಕಿಡಾಗುತಿತ್ತು.
ಈಗ ಯತ್ನಾಳ್ ಜೊತೆಗೆ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ , ಬಿಪಿ ಹರೀಶ್, ಜಿಎಂ ಸಿದ್ದೇಶ್ವರ್ ಸೇರಿದಂತೆ ಕೆಲವರು ಯತ್ನಾಳ್ ಜೊತೆ ಕೈ ಜೊಡಿಸಿ ವಿಜಯೇಂದ್ರ ನಾಯಕತ್ವಕ್ಕೆ ಸಡ್ಡು ಹೊಡೆದಿದ್ದಾರೆ. ವಿಜಯೇಂದ್ರ ವಿರುದ್ದ ಯತ್ನಾಳ್ ಅಂಡ್ ಟೀಮ್ ನೇರವಾಗಿ ಟೀಕೆ ಮಾಡುತ್ತಿರೋದನ್ನ ಸರಿಪಡಿಸಲು ಆರ್ ಎಸ್ ಎಸ್ ನಾಯಕರು ಸಹ ಮಧ್ಯಪ್ರವೇಶಿಸಿ ರೆಬಲ್ಸ್ ನಾಯಕರಿಂದ ಏನು ಸಮಸ್ಯೆ ಎಂದು ಆಲಿಸಲು ಒಂದು ಸಭೆ ಸಹ ನಡೀತು. ಸಭೆ ಏನೋ ನಡೀತು ಆದ್ರೆ ಭಿನ್ನಮತ ಮಾತ್ರ ಶಮನವಾಗಲಿಲ್ಲ. ವಕ್ಫ್ ಹೋರಾಟವನ್ನ ಯತ್ನಾಳ್ ಅಂಡ್ ಟೀಂ ಪ್ರತ್ಯೇಕ ಹೋರಾಟ ಮಾಡುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರಗೆ ಸಡ್ಡು ಹೊಡೆದರು.
ಇದ್ರ ನಡುವೆ ಬಿಎಸ್ ವೈ, ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಟೀಕಿಸಿದ ಕಾರಣ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಯತ್ನಾಳ್ ಗೆ ನೋಟಿಸ್ ಸಹ ನೀಡಿತು. ಯತ್ನಾಳ್ ಶಿಸ್ತು ಸಮಿತಿ ಮುಂದೆ ಹಾಜರಾಗಿ ಉತ್ತರವನ್ನ ಸಹ ಕೊಟ್ಟಿ ಬಂದ್ರು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿ ಟೀಕೆ ಮಾಡೋದನ್ನ ನಿಲ್ಲಿಸಿ ಎಂದು ಸೂಚನೆ ನೀಡ್ತು ಆದ್ರೆ ಶಿಸ್ತು ಸಮಿತಿ ಸೂಚನೆ ಬಳಿಕವೂ ಬಿಎಸ್ ವೈ ಕುಟುಂಬದ ವಿರುದ್ಧ ಯತ್ನಾಳ್ ಈಗಲೂ ಬಹಿರಂಗವಾಗಿ ಟೀಕೆ ಮಾಡ್ತಿದ್ದಾರೆ ಅಲ್ದೇ ವಕ್ಫ್ ಬೋರ್ಡ್ ವಿರುದ್ಧ ಎರಡನೇ ಸುತ್ತಿನ ಪ್ರತ್ಯೇಕ ಹೋರಾಟಕ್ಕೆ ಯತ್ನಾಳ್ ಅಂಡ್ ಟೀಂ ಸಜ್ಜಾಗುತ್ತಿದೆ.
ಯತ್ನಾಳ್ ಅಂಡ್ ಟೀಂಗೆ ಟಾಂಗ್ ಕೊಡಲು ವಿಜಯೇಂದ್ರ ಪರವಾಗಿ ರೇಣುಕಾಚಾರ್ಯ ಕಟ್ಟಾ ಸುಬ್ರಹ್ಮಣ್ಯನಾಯ್ಡು ನೇತೃತ್ವದ ಮಾಜಿ ಸಚಿವ ಮಾಜಿ ಶಾಸಕರು ಸಹ ಪ್ರತ್ಯೇಕವಾಗಿ ಸಭೆ ನಡೆಸಿ ವಿಜಯೇಂದ್ರ ಮತ್ತು ಯಡಿಯೂರಪ್ಪನವರಿಗೆ ಬೆಂಬಲ ಸೂಚಿಸಿ ಬೃಹತ್ ಸಮಾವೇಶ ಮಾಡಲು ಮುಂದಾಗಿದ್ರು. ಯಡಿಯೂರಪ್ಪ ಹುಟ್ಟು ಹಬ್ಬವನ್ನ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ರು ಆದ್ರೆ ಈ ಸಮಾವೇಶಕ್ಕೆ ವಿಜಯೇಂದ್ರ ಮತ್ತು ಯಡಿಯೂರಪ್ಪ ಒಪ್ಪದ ಕಾರಣ ಸಧ್ಯಕ್ಕೆ ನಿಲ್ಲಿಸಲಾಗಿದೆ. ಯತ್ನಾಳ್ ಟೀಂ ಗೆ ಟಾಂಗ್ ಕೊಡಲು ಇವರು ಸಭೆ ಅವರಿಗೆ ಟಾಂಗ್ ಕೊಡಲು ಅವರು ಸಭೆ ನಡೆಯುತ್ತಿರೋದು ನೋಡಿ ಪಕ್ಷದ ಹಿರಿಯ ನಾಯಕರು ಮತ್ತು ಕಾರ್ಯಕರ್ತರಲ್ಲಿ ಬೇಸರ ತಂದಿದೆ. ವಿರೋಧ ಪಕ್ಷವಾಗಿ ಆಡಳಿತ ಪಕ್ಷವನ್ನ ಸಮರ್ಥವಾಗಿ ಎದುರಿಸಬೇಕಿದ್ದ ರಾಜ್ಯ ಬಿಜೆಪಿ ಒಳಗೊಳಗೆ ಭಿನ್ನಮತದಿಂದ ರೋಸಿಹೋಗುತ್ತಿದೆ ಎಂದು ಪಕ್ಷದ ಹಿರಿಯ ನಾಯಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಯತ್ನಾಳ್ ಪ್ರಮುಖ ಬೇಡಿಕೆ ಕುಟುಂಬ ರಾಜಕಾರಣಕ್ಕೆ ಮಣೆ ಹಾಕದೇ ಬೇರೆಯವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕೊಡಬೇಕು ಅನ್ನೋದು ಆದ್ರೆ ಈಗಾಗಲೇ ಹಲವು ಲೆಕ್ಕಾಚಾರ ಹಾಕಿ ವಿಜಯೇಂದ್ರರನ್ನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಕೇಂದ್ರ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ ಈಗ ಬದಲಾವಣೆ ಮಾಡುತ್ತಾ ಅನ್ನೋದು ಎಲ್ಲರ ಪ್ರಶ್ನೆ.
ಈ ವರ್ಷ ಅಂದ್ರೆ 2025 ರಲ್ಲಾದ್ರು ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಈ ಭಿನ್ನಮತೀಯ ಚಟುವಟಿಕೆಯನ್ನ ಕೇಂದ್ರದ ಬಿಜೆಪಿ ನಾಯಕರು ಶಮನ ಮಾಡುತ್ತಾರಾ ? ವಿಜಯೇಂದ್ರ - ಯತ್ನಾಳ್ ಒಂದಾಗುತ್ತಾರಾ? ಕಾದು ನೋಡಬೇಕಿದೆ.
-ಶರತ್ ಕಪ್ಪನಹಳ್ಳಿ
ರಾಜಕೀಯ ವರದಿಗಾರ
ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
01/01/2025 09:53 pm