ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಖಾಕಿ ಪಡೆ ಅಲರ್ಟ್ ಆಗಿದೆ. ಸ್ವತಃ ಕಮಿಷನರ್ ಎನ್. ಶಶಿಕುಮಾರ್ ಫೀಲ್ಡ್‌ಗೆ ಇಳಿದು ಪುಂಡ ಪೋಕರಿಗಳಿಗೆ ಹಾಗೂ ಮಾದಕ ವ್ಯಸನಿಗಳಿಗೆ ಬಿಸಿ ಮುಟ್ಟಿಸುವ ಕಾರ್ಯವನ್ನು ಮಾಡಿದರು.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶಾಲ ನಗರದ ಬಳಿ ಕಮಿಷನರ್ ರೌಡಿಂಗ್ ವೇಳೆಯಲ್ಲಿ ಥ್ರಿಬಲ್ ರೈಡ್ ಹೋಗುವಾಗ ಬೈಕ್ ತಡೆಯಲು ಪ್ರಯತ್ನಿಸಿದಾಗ ಪೊಲೀಸರ ಮೇಲೆಯೇ ಬೈಕ್ ಹತ್ತಿಸಲು ಪ್ರಯತ್ನ ನಡೆಸಿದ ಮೂವರು ಯುವಕರನ್ನ ವಶಕ್ಕೆ ಪಡೆದಿದ್ದಾರೆ. ಹಾಗೂ ಬೈಕ್ ಸೀಜ್ ಮಾಡಲಾಗಿದೆ.
ಇದೇ ವೇಳೆ ಸಿದ್ದಾರೂಡ ಮಠದ ಬಳಿಯಲ್ಲಿ ಮಾದಕ ವಸ್ತು ಸೇವನೆ ಮಾಡುತ್ತಿದ್ದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ಅವರು ಸೇವನೆ ಮಾಡುತ್ತಿದ್ದ ಮಾದಕ ವಸ್ತು ಸೀಜ್ ಮಾಡಿ ಇದು ಎಲ್ಲಿಂದ ಬಂತು? ಅನ್ನೋದನ್ನಾ ತನಿಖೆ ನಡೆಸುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಎಲ್ಲೆಂದರಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದ ಪೋಕರಿಗಳಿಗೆ, ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್ ಮೇಲೆ ಸರ್ಕಾರ್, ಬಾಸ್ ಅಂತಾ ಬರೆಸಿದ ಪುಂಡರ ಬೈಕ್‌ಗಳನ್ನ ಸೀಜ್ ಮಾಡಲಾಗಿದೆ.
ಹುಬ್ಬಳ್ಳಿಯ ದಕ್ಷಿಣ ಉಪವಿಭಾಗದಲ್ಲಿ ಕಮಿಷನರ್ ಎನ್ ಕಮಿಷನರ್ ಅವರಿಗೆ ಡಿಸಿಪಿ ನಂದಗಾವಿ, ಇನ್ಸ್‌ಪೆಕ್ಟರ್‌ಗಳಾದ ಎಸ್ ನಾಯಕ, ತಹಶೀಲ್ದಾರ್,ಜಾಧವ್ ಸೇರಿದಂತೆ ಹಲವು PSI ಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/01/2025 11:02 pm