ವಿಜಯಪುರ: ವಿಜಯಪುರದಲ್ಲಿ ವಕ್ಫ್ ವಿಚಾರವಾಗಿ ರೈತರು ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದು, ಹೋರಾಟದ ಫಲವಾಗಿ ಇಂಡಿ ತಾಲ್ಲೂಕಿನ ತೆನಿಹಳ್ಳಿ ರೈತ ಯಮನಪ್ಪ ಕೆಂಗನಾಳ ಎಂಬವರ ಉತಾರಿಯಲ್ಲಿ ವಕ್ಫ್ ಹೆಸರು ಮಾಯವಾಗಿದೆ.
ಇದೇ ತಿಂಗಳ 10ನೇ ತಾರೀಕಿನ ಉತಾರಿಯಲ್ಲಿ ಕರ್ನಾಟಕ ವಕ್ಫ್ ಬೋರ್ಡ್ ಅಂತಾ ಬರ್ತಾ ಇತ್ತು. ಈಗ RTC (ಉತಾರಿಯಲ್ಲಿ) ಕಾಲಂ ನಂಬರ್ 11ರಲ್ಲಿ ವಕ್ಫ್ ಹೆಸರು ಕಡಿಮೆಯಾಗುತ್ತಿವೆ. ಸದ್ಯ ರೈತರ ಹೋರಾಟಕ್ಕೆ ಸಂದ ಮೊದಲ ಜಯ ಇದಾಗಿದ್ದು, ರೈತರು ನಿಟ್ಟುಸಿರು ಬಿಡುವಂತಾಗಿದೆ.
-ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ್ ವಿಜಯಪುರ
PublicNext
30/10/2024 07:54 pm