ವಿಜಯಪುರ : ಅಂಬೇಡ್ಕರ್ ಕುರಿತಾಗಿ ಅಮಿತ್ ಶಾ ಹೇಳಿಕೆ ಖಂಡಿಸಿ ವಿವಿಧ ಸಂಘಟನೆಯಿಂದ ಡಿ, 28 ರಂದು ವಿಜಯಪುರ ಬಂದ್ ಗೆ ಕರೆ ನೀಡಲಾಗಿತ್ತು. ಆದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನಲೆಯಲ್ಲಿ ಡಿ.28 ರ ಬದಲಾಗಿ ಡಿ.30 ಕ್ಕೆ ಮುಂದೂಡಲಾಯಿತು. ಇದರಿಂದ ಸಿಟ್ಟಿಗೆದ್ದ ದಲಿತ ಸಂಘಟನೆಗಳ ಒಕ್ಕೂಟ ನಾವು ಬಂದ್ ಮಾಡೇ ಮಾಡುತ್ತೇವೆ ಎಂದು ಹೇಳಿ ಇಂದು ವಿಜಯಪುರ ಬಂದ್ ಕರೆ ಮುಂದಾದರು.
ಬೆಳ್ಳಂ ಬೆಳಿಗ್ಗೆ ಹೊತ್ತಿಗೆ ಕೆಲ ಅಂಗಡಿಗಳು ಬಂದ್ ಮಾಡಿದ್ದರೆ ಮಧ್ಯಾಹ್ನದ ಹೊತ್ತಿಗೆ ಮತ್ತೆ ಅಂಗಡಿಗಳು ಎಂದಿನಂತೆ ಆರಂಭಗೊಂಡವು. ಇನ್ನೂ ಬಸ್ ಅಟೋ ಸಂಚರದಲ್ಲಿ ಮಾತ್ರ ಯಾವುದೇ ವ್ಯತ್ಯಯ ಉಂಟಾಗಲಿಲ್ಲ. ಇನ್ನೂ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು..
ಬೈಟ್ : ಮತೀನಕುಮಾರ, ದಲಿತ ಸಂಘಟನೆ ಮುಖಂಡ.
ನಗರದ ಸಿದ್ದೇಶ್ವರ ದೇವಾಲಯದಿಂದ ಡಿಸಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವ ಉದ್ದೇಶವನ್ನು ದಲಿತ ಸಂಘಟನೆಗಳ ಒಕ್ಕೂಟದವರು ಹೊಂದಿದ್ದರು. ಆದರೆ ಪೊಲೀಸ್ ಇಲಾಖೆಯವರು ಇದಕ್ಕೆ ಅನುಮತಿ ಕೊಡದೇ ನಗರದ ಅಂಬೇಡ್ಕರ್ ವೃತ್ತದಲ್ಲಿ ಮಾತ್ರ ಪ್ರತಿಭಟನೆ ನಡೆಸುವಂತೆ ಸೂಚಿಸಿದರು. ಇದರಿಂದ ಪೊಲೀಸರು ಹಾಗೂ ಪ್ರತಿಭಟನಾ ನಿರತರ ನಡುವೆ ಮಾತಿನ ಚಕಮಕಿ ನಡೆಯಿತು.
ಬಳಿಕ ಅಂಬೇಡ್ಕರ್ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುವುದರ ಜೊತೆಗೆ ಅಮಿತ್ ಶಾ ಶವ ಯಾತ್ರೆ ಮಾಡಿ ಪ್ರತಿಕೃತಿ ದಹಿಸಿ, ಆಕ್ರೋಶ ಹೊರಹಾಕಿದರು.
ಬೈಟ್ : ಜಿತೇಂದ್ರ ಕಾಂಬ್ಳೆ, ದಲಿತ ಸಂಘಟನೆ ಮುಖಂಡ.
ಇತ್ತ ಅಹಿಂದ, ದಲಿತ ಸಂಘಟನೆಗಳ ಒಕ್ಕೂಟ, ಡಾ.ಬಿ ಆರ್ ಅಂಬೇಡ್ಕರ್ ವಿಚಾರವಾದಿ ಬಳಗ ಇವುಗಳ ಧ್ವಂದ ನಿಲುವಿನಿಂದಾಗಿ ವಿಜಯಪುರ ಬಂದ್ ಅಷ್ಟಕಷ್ಟಕ್ಕೆ ಎಂಬತಾಗಿದೆ. ಇದೇ ಡಿ.30 ಕ್ಕೆ ಮತ್ತೊಮ್ಮೆ ನೀಡಿರುವ ಬಂದ್ ಕರೆ ಎಷ್ಟರ ಮಟ್ಟಿಗೆ ಜಿಲ್ಲೆಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಮಂಜು ಕಲಾಲ ಪಬ್ಲಿಕ ನೆಕ್ಸ್ಟ ವಿಜಯಪುರ
PublicNext
28/12/2024 10:37 pm