ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ : ಟ್ರಾನ್ಸಜೆಂಡರಗಳಿಗೂ ಶಕ್ತಿ ಯೋಜನೆ ಸೌಲಭ್ಯ ಕಲ್ಪಿಸಲು ಆಗ್ರಹ

ವಿಜಯಪುರ : ರಾಜ್ಯದಲ್ಲಿ ಶಕ್ತಿ ಯೋಜನೆಯಿಂದ ಬಸ್ ಗಳು ಪುಲ್ ರಶ್ ಆಗಿ ಪ್ರತಿನಿತ್ಯ ವಿದ್ಯಾರ್ಥಿಗಳು ವಯೋವೃದ್ಧರು ಪರದಾಡುವಂತಾಗಿದೆ ಇನ್ನೂ ಇದರ ಮದ್ಯ ಟ್ರಾನ್ಸ ಜೆಂಡರಗಳು ನಮಗೂ ಶಕ್ತಿ ಯೋಜನೆ ಸೌಲಭ್ಯ ಕಲ್ಪಿಸಿ ಇಲ್ಲವಾದರೇ ಶಕ್ತಿ ಯೋಜನೆ ನಿಲ್ಲಿಸಿ ಎಂಬ ಕೂಗೂ ಕೇಳಿ ಬಂದಿದೆ.

ಹೌದು! ವಿಜಯಪುರ ನಗರದ ಡಿಸಿ ಕಚೇರಿ ಹಾಗೂ ಕೇಂದ್ರ ಬಸ್ ನಿಲ್ದಾಣ ಬಳಿ ರಾಜ್ಯ ಸರ್ಕಾರದ ಸ್ತ್ರೀ ಶಕ್ತಿ ಯೋಜನೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೂ ಅವಕಾಶ ನೀಡಿ ಇಲ್ಲವೇ ಯೋಜನೆ ನಿಲ್ಲಿಸಿ ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ‌ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ಇನ್ನೂ ದಿನನಿತ್ಯ ಬಸ್ ಗಳಲ್ಲಿ ಪ್ಯಾಂಟ ಶರ್ಟ್, ಸೀರೆ ಮೇಲೆ ಇರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಬಸ್ ನಲ್ಲಿ ಪ್ರಯಾಣಿಸುವಾಗ ಕಂಡಕ್ಟರ್ ಗಳಿಗೆ ಜಿಲ್ಲಾಧಿಕಾರಿಗಳು ನೀಡಿರುವ ಟ್ರಾನ್ಸಜೆಂಡರ್ ಐಡಿ ಕಾರ್ಡ್ ತೋರಿಸಿದರೂ ಕಂಡಕ್ಟರ್ ಗಳು ತುಂಬಾ ತುಚ್ಚುವಾಗಿ ನಿಂದಿಸುತಿರುವುದಲ್ಲದೇ, ಈ ಕಾರ್ಡ್ ಗಳನ್ನು ನಿಮಗೆ ಯಾರು ನೀಡುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಪ್ರಶ್ನಿಸುತ್ತಿದ್ದಾರೆ.

ಈ ಮೂಲಕ ನಮ್ಮ ಲಿಂಗತ್ವವನ್ನು ಬಹಿರಂಗಗೊಳಿಸುತ್ತಿದ್ದಾರೆ. ಶಕ್ತಿ ಯೋಜನೆಯಲ್ಲಿ ಎದುರಿಸುತ್ತಿರುವ ಸಮಸ್ಯೆ ಕುರಿತು ನವಸ್ಪೂರ್ತಿ ಸಂಘಟನೆಯಿಂದ ಮೌಕಿಕವಾಗಿ ಹಾಗೂ ನೂರಾರು ಪತ್ರಗಳನ್ನು ಬರೆದರೂ ಯಾವುದೇ ಕ್ರಮವಾಗಿಲ್ಲ ಕೂಡಲೇ ರಾಜ್ಯ ಸರ್ಕಾರ ಶಕ್ತಿ ಯೋಜನೆಯನ್ನ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಮತ್ತು ಟ್ರಾನ್ಸಜೆಂಡರ್ ಗಳನ್ನು ನಿಂದಿಸುವವರ ವಿರುದ್ಧ ತಕ್ಷಣವೇ ಕ್ರಮಕೈಗೊಳ್ಳಬೇಕು ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಸಹ ಘನತೆ, ಗೌರವಯುತ ಸಮಾನತೆ ಬದುಕನ್ನು ನಡೆಸಲು ಉತ್ತಮ ವಾತಾವರಣ ನಿರ್ಮಿಸಬೇಕೆಂದು ಒತ್ತಾಯಿಸಿದರು.

ಸರ್ಕಾರ ಇವರ ಮನವಿಗೆ ಸ್ಪಂದಿಸುತ್ತದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.

ಮಂಜು ಕಲಾಲ ಪಬ್ಲಿಕ ನೆಕ್ಸ್ಟ ವಿಜಯಪುರ

Edited By : Suman K
PublicNext

PublicNext

04/01/2025 01:23 pm

Cinque Terre

24.16 K

Cinque Terre

0