ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ''ಸಿ.ಟಿ ರವಿ ಅವರನ್ನ ಕೊಲೆ ಮಾಡೋ ಸಂಚು ನಡೆದಿತ್ತು" - ಯತ್ನಾಳ ಗಂಭೀರ ಆರೋಪ

ವಿಜಯಪುರ: ಸಿಟಿ ರವಿ ಪ್ರಕರಣವನ್ನ ಸಿಓಡಿಗೆ ಕೊಡುವ ಅವಶ್ಯಕತೆ ಇರಲಿಲ್ಲ, ವಿಧಾನ ಪರಿಷತ್ ಸಭಾಪತಿಗಳೇ ದಾಖಲೆ ಇಲ್ಲ ಎಂದಿದ್ದಾರೆ, ಹೀಗಾಗಿ ನಾವು ಒಬ್ಬ ಸಿಟಿಂಗ್ ಜಡ್ಜ್ ನಿಂದ ನ್ಯಾಯಾಂಗ ತನಿಖೆ ಆಗಬೇಕು ಎಂದು ಬಸನಗೌಡ್ ಪಾಟೀಲ್ ಯತ್ನಾಳ ಒತ್ತಾಯಿಸಿದ್ದಾರೆ.

ಈ ಕುರಿತು ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಒಬ್ಬ ಐಪಿಎಸ್ ಅಧಿಕಾರಿ ಲಾಠಿ ಚಾರ್ಜ್ ಮಾಡಿದ್ದನ್ನು ನೋಡಿದರೆ ನಮಗೆ ನಂಬಿಕೆಯೇ ಹೋಗಿದೆ, ಹಾಗಾಗಿ ನಾವು ಒಬ್ಬ ಸಿಟಿಂಗ್ ಜಡ್ಜ್ ನಿಂದ ನ್ಯಾಯಾಂಗ ತನಿಖೆಗೆ ಕೇಳುತ್ತಿದ್ದೇವೆ. ಇನ್ನೂ ಇದೆಲ್ಲವನ್ನೂ ನೋಡಿದ್ರೆ, ಸಿ.ಟಿ ರವಿ ಅವರನ್ನ ಕೊಲೆ ಮಾಡೋ ಸಂಚು ನಡೆದಿತ್ತು, ಎಂದು ಗೊತ್ತಾಗುತ್ತಿದೆ. ಅದರಿಂದ ಇದು ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಮಂಜು ಕಲಾಲ, ಪಬ್ಲಿಕ ನೆಕ್ಸ್ಟ ವಿಜಯಪುರ

Edited By : Ashok M
PublicNext

PublicNext

25/12/2024 04:42 pm

Cinque Terre

27.92 K

Cinque Terre

1