ವಿಜಯಪುರ: ದಲಿತರು ಕಾಂಗ್ರೆಸ್ ನ ಪೊಳ್ಳು ಭರವಸೆಗಳಿಗೆ ಒಳಗಾಗಬೇಡಿ. ದೇಶದಲ್ಲಿ ಕಾಂಗ್ರೆಸ್ ಸರ್ವನಾಶ ಆದ್ರೆ ಸಂವಿಧಾನ ಉಳಿಯುತ್ತೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಾಂದ್ರಾದಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಯಾರು?
ಕಾನೂನು ತಿದ್ದುಪಡಿಗೆ ಮುಂದಾದಾಗ ಅಸಹಕಾರ ಮಾಡಿದ್ರು.ನೆಹರು, ಬಾಬಾ ಸಾಹೇಬರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅಮಿತ್ ಶಾ ಅವರ ಹೇಳಿಕೆ ಕಟ್ ಮಾಡಿ ಬೇಕಾದಂತೆ ಉಪಯೋಗ ಮಾಡ್ತಿದ್ದಾರೆ.
ಬಾಬಾ ಸಾಹೇಬರಿಗೆ ಭಾರತ ರತ್ನ ಕೊಟ್ಟಿದ್ದು ನಾವು. ನೆಹರು, ಇಂದಿರಾ, ರಾಜೀವ್ ಗಾಂಧಿ ತಾವೇ ಸ್ವತಃ ಭಾರತ ರತ್ನ ತೆಗೆದುಕೊಂಡರು. ಆದರೆ,ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡಲಿಲ್ಲ.ಬಾಬಾ ಸಾಹೇಬರ ಪಾರ್ಥಿವ ಶರೀರ ತರಲು ವಿಮಾನ ವ್ಯವಸ್ಥೆ ಸಹ ಮಾಡಲಿಲ್ಲ. ಅವರ ಕಾರು ಮಾರಾಟ ಮಾಡಿ ಅವರ ಪಾರ್ಥಿವ ಶರೀರ ತರಲಾಯಿತು. ದೇಶದಲ್ಲಿ ಸನಾತನ ಧರ್ಮ ಉಳಿದರೆ ಮಾತ್ರ ಸಂವಿಧಾನ ಉಳಿಯುತ್ತೆ. ಬಾಂಗ್ಲಾದೇಶದಲ್ಲಿ ಇಸ್ಲಾಂ ನಿಂದಾಗಿ ಅಲ್ಲಿನ ಸಂವಿಧಾನ ಉಳಿಯಲಿಲ್ಲ. ಅಮಿತ್ ಶಾ ಹೇಳಿಕೆಯಲ್ಲಿ ತಪ್ಪಿಲ್ಲ, ಹೇಳಿಕೆ ತಿರುಚಲಾಗಿದೆ ಎಂದರು.
PublicNext
25/12/2024 04:14 pm