ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪು ಪುಣ್ಯಸ್ಮರಣೆ ; ಹುಬ್ಬಳ್ಳಿ ನವನಗರದಲ್ಲಿ ಅದ್ದೂರಿ ಕಾರ್ಯಕ್ರಮ

ಹುಬ್ಬಳ್ಳಿ: ರಾಜರತ್ನ ಡಾ. ಪುನೀತ್ ರಾಜ್‍ಕುಮಾರ್ ಅವರ ಪುಣ್ಯಸ್ಮರಣೆ ನಿಮಿತ್ತವಾಗಿ, ಹುಬ್ಬಳ್ಳಿಯ ನವನಗರದ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ, ಪುನೀತ್ ರಾಜಕುಮಾರ್ ವೃತ್ತದಲ್ಲಿ ಅದ್ದೂರಿಯಾಗಿ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿದ್ದು, ಹಲವಾರು ಗಾನ ಕಲಾವಿದರು ಯುವರತ್ನನ ಹಾಡು ಹೇಳುವುದರ ಮೂಲಕ ಜನರನ್ನು ರಂಜಿಸಿದರು.

ಈ ಕಾರ್ಯಕ್ರಮದಲ್ಲಿ ನೂರಾರು ಜನರು ಹಾಡು ಹೇಳಿದರು. ಹಲವಾರು ಗಣ್ಯರು ಭಾಗಿಯಾಗಿದ್ದು, ಗಾನಕೋಗಿಲೆ ಖ್ಯಾತಿಯ ಮಹಾನ್ಯ ಪಾಟೀಲ್ ಸಕತ್ ಹಾಡು ಹೇಳುತ್ತಿದ್ದಂತೆ ಜನರು ಸಿಳ್ಳೆ ಚಪ್ಪಾಳೆ ಹೊಡೆದರು. ಅಷ್ಟೇ ಅಲ್ದೆ ಎಸಿಪಿ ವಿನೋದ್ ಮುಕ್ತೇದಾರವರು ರಾಜಕುಮಾರ್ ಚಿತ್ರದ ಗೊಂಬೆ ಹೇಳುತೈತೆ ಹಾಡನ್ನು ಅತ್ಯುತ್ತಮವಾಗಿ ಹಾಡಿ ಜನ ಮೆಚ್ಚುಗೆ ಗಳಿಸಿದರು. ಅಭಿಮಾನಿಗಳು ಮೊಬೈಲ್ ಟಾರ್ಚ್ ಹಿಡಿದು ಯುವರತ್ನ ಡಾ. ಪುನೀತರಾಜಕುನಾರ್ ಅವರ ಪುಣ್ಯಸ್ಮರಣೆ ಆಚರಣೆ ಮಾಡಿದರು.

Edited By : Somashekar
Kshetra Samachara

Kshetra Samachara

30/10/2024 06:13 pm

Cinque Terre

35.19 K

Cinque Terre

0

ಸಂಬಂಧಿತ ಸುದ್ದಿ