ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ : ನಾನಾ ಇಲಾಖೆ, ಸಂಘಟನೆಗಳಿಂದ ಅದ್ದೂರಿ ರಾಜ್ರ್ಯೋತ್ಸವ ಆಚರಣೆಗೆ ನಿರ್ಧಾರ

ಬೈಲಹೊಂಗಲ : ಸಮೀಪದ ಮುರಗೋಡ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಗ್ರಾಮ ಪಂಚಾಯಿತಿ, ಶಿಕ್ಷಣ, ಕೃಷಿ, ಆರಕ್ಷಕ, ಕಂದಾಯ ಇಲಾಖೆ ಹಾಗೂ ನಾನಾ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಗಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ನೇತೃತ್ವ ವಹಿಸಿದ್ದ ಪಿಡಿಒ ರಾಯಪ್ಪ ಬಾಗಿಲದ ಮಾತನಾಡಿ, ಈ ಬಾರಿ ರಾಜ್ಯೋತ್ಸವವನ್ನು ಎಲ್ಲರು ಒಗ್ಗೂಡಿ ಅದ್ದೂರಿಯಾಗಿ ಆಚರಿಸಲು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳಿಂದ ಕನ್ನಡ ನಾಡು ನುಡಿ ನೆಲ, ಜಲ ಬಗ್ಗೆ ಬೆಳಕು ಚೆಲ್ಲುವ ಆಕರ್ಷಕ ರೂಪಕಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಸಿಆರ್‍ಪಿ ಎಸ್.ಎಸ್. ಮಲ್ಲಣ್ಣವರ ಮಾತನಾಡಿ, ಗ್ರಾಮದ ನಾನಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕರು, ಕನ್ನಡಪರ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರೆಲ್ಲ ಜತೆಗೂಡಿ ಉತ್ಸಾಹದಿಂದ ರಾಜ್ಯೋತ್ಸವ ಆಚರಿಸಲು ಮುಂದಾಗಬೇಕು ಎಂದರು.

ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದ, ನಂತರ ರೂಪಕಗಳ ಮೆರವಣಿಗೆ ರೂಪರೇಷೆ, ಪೊಲೀಸ್ ಇಲಾಖೆಯಿಂದ ಕಾನೂನು ಸುವೆವಸ್ಥೆ ಸೇರಿದಂತೆ ನಾನಾ ಇಲಾಖೆಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.

Edited By : PublicNext Desk
Kshetra Samachara

Kshetra Samachara

22/10/2024 07:03 pm

Cinque Terre

2.18 K

Cinque Terre

0

ಸಂಬಂಧಿತ ಸುದ್ದಿ