ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಬಾಗ: "ಸರ್ವರ್ ಕಣ್ಣಾಮುಚ್ಚಾಲೆ" ಬಡಪಾಯಿಗಳು ಸೋತು ಸುಣ್ಣ- ರಾತ್ರಿ 11 ಗಂಟೆವರೆಗೆ ಕಾದರೂ ಅಕ್ಕಿಯಿಲ್ಲ!

ರಾಯಬಾಗ: ಅಕ್ಟೋಬರ್ ತಿಂಗಳು ಅಂತ್ಯವಾಗುತ್ತಾ ಬರುತ್ತಿದ್ದರೂ ಸಿಗುತ್ತಿಲ್ಲ ಅನ್ನಭಾಗ್ಯ ಯೋಜನೆಯ ಅಕ್ಕಿ. ನಿಗದಿತ ಅವಧಿಗೆ, ಸರಿಯಾದ ಸಮಯಕ್ಕೆ ಅಕ್ಕಿ ಲೋಡ್ ಬಂದು ಪಡಿತರ ಅಂಗಡಿಗಳಲ್ಲಿ ಭರ್ತಿಯಾಗಿದ್ದರೂ ಫಲಾನುಭವಿಗಳ ಚೀಲಕ್ಕೆ ಮಾತ್ರ ಅಕ್ಕಿ ಬೀಳುತ್ತಿಲ್ಲ!

ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಒಟ್ಟು ಒಂಬತ್ತು ಪಡಿತರ ವಿತರಣೆ ಅಂಗಡಿಗಳ ಮುಂದೆ ಗ್ರಾಹಕರು ಕಳೆದ ಮೂರು ನಾಲ್ಕು ದಿನಗಳಿಂದ ಬೆಳಗ್ಗೆ 10 ಗಂಟೆಯಿಂದ ರಾತ್ರಿ 11 ಗಂಟೆಯ ವರೆಗೆ ಸರತಿ ಸಾಲಿನಲ್ಲಿ ನಿಂತರೂ ಕೂಡ ಪಡಿತರ ಅಕ್ಕಿ ಸಿಗುತ್ತಿಲ್ಲ!

ಕಾರಣ ಆಹಾರ ಇಲಾಖೆ ಸಾಫ್ಟ್ ವೇರ್ ನವೀಕರಿಸಲು ಈ ವಿಳಂಬವಾಗುತ್ತಿದೆ. ಅಲ್ಲದೆ, ಸರ್ವರ್ ಯಾವಾಗ ಬರುತ್ತೋ ಆವಾಗ ಮಾತ್ರ ಸರತಿಯಲ್ಲಿದ್ದವರಿಗೆ ಅನ್ನಭಾಗ್ಯ, ಇಲ್ಲವಾದರೆ ನಿರಾಸೆಯಿಂದ ತಮ್ಮ ಮನೆಗಳಿಗೆ ಮರಳುವಂತಾಗಿದೆ.

Edited By : Ashok M
PublicNext

PublicNext

22/10/2024 08:41 am

Cinque Terre

19.05 K

Cinque Terre

1

ಸಂಬಂಧಿತ ಸುದ್ದಿ