ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಅಪಘಾತದಲ್ಲಿ ಹೋದದ್ದು 7 ಜೀವ - ಸಾಂತ್ವನಕ್ಕೆ ಬಂದವರು ಸಹಾಯಕ್ಕೆ ಬರಲಿಲ್ಲ

ಅಥಣಿ: ಅಥಣಿ ತಾಲೂಕಿನ ಬಡಚಿ ಗ್ರಾಮದ 15 ಜನರ ಕುಟುಂಬ ದೇವರ ದರ್ಶನಕ್ಕೆಂದು ತಿರುಪತಿಗೆ ತೆರಳಿತ್ತು. ಮರಳಿ ಬರುವಾಗ ತೆಲಂಗಾಣದ ಕಡಪ-ಚಿತ್ತೂರ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ಕ್ರೂಸರ್​ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಒಂದೇ ಕುಟುಂಬದ 6 ಜನ ಹಾಗೂ ಡ್ರೈವರ್ ಸೇರಿ 7 ಜನ ದಾರುಣ ಸಾವು ಕಂಡು ಇಂದಿಗೆ ಒಂದು ವರ್ಷ ಗತಿಸಿದೆ.

ಅಪಘಾತದಲ್ಲಿ ಹಣಮಂತ ಅಜೂರ್ (40), ಮಹಾನಂದ ಅಜೂರ (32), ಶೋಭಾ ಅಜೂರ (36), ಚಾಲಕ ಹಣಮಂತ ಜಾಧವ (42), ಅಂಬಿಕಾ (14) ಸ್ಥಳದಲ್ಲೇ ಮೃತರಾಗಿದ್ದರು. ಕಸ್ತೂರಿ, ಮೇಘಾ, ಶಿವಾನಂದ್, ಬಸಪ್ಪ, ಮಲ್ಲಪ್ಪ ಅಕ್ಷಿತ, ಉದಯ, ಸುನಂದಾ, ಮಹೇಶ್, ಸಾಕ್ಷಿ ಮತ್ತು ಬಸವರಾಜ ಸೇರಿ ಒಟ್ಟು 11 ಜನರು ಗಾಯಗೊಂಡು ಕೆಲವರು ಚೇತರಿಸಿಕೊಂಡಿದ್ದರು. ಆದರೆ ಇನ್ನೂ ಕುಟುಂಬ ಆಘಾತದ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ.

ಆದ್ರೆ ದುರಂತ ಅಂದ್ರೆ ಆಜೂರ ಕುಟುಂಬದ ಕಷ್ಟಕ್ಕೆ ಕ್ಷಣ ಮಾತ್ರಕ್ಕೆ ಬಂದ ಸರ್ಕಾರ ಹಾಗೂ ಜನಪ್ರತಿನಿಧಿಗಳು ಒಂದು ರೂಪಾಯಿ ಪರಿಹಾರ ನೀಡಿಲ್ಲ ಅನ್ನೋದು ಅಷ್ಟೇ ಸತ್ಯ. ಅಥಣಿ ಶಾಸಕ ಲಕ್ಷ್ಮಣ ಸವದಿ, ಮಾಜಿ ಶಾಸಕ ಮಹೇಶ ಕುಮಠಳ್ಳಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಚಿವ ಸತೀಶ ಜಾರಕಿಹೊಳಿ, ಇವರೆಲ್ಲರೂ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರದ ಭರವಸೆ ನೀಡಿ ಕೈತೊಳೆದುಕೊಂಡಿದ್ದಾರೆ. ಆದರೆ ಯಾವೊಬ್ಬ ಜನಪ್ರತಿನಿಧಿಯು ಒಂದು ರೂಪಾಯಿ ಕೂಡ ಪರಿಹಾರ ನೀಡಿಲ್ಲ.

ತೆಲಂಗಾಣ ಸರ್ಕಾರಿ ಅಧಿಕಾರಿಗಳ ಖರ್ಚು, ಮೃತರ ದೇಹ ತರಲು ಬಂದ ಒಟ್ಟು ವಾಹನಗಳ ಖರ್ಚು, ಇನ್ನುಳಿದ ಆಸ್ಪತ್ರೆ ಖರ್ಚು ವೆಚ್ಚ ಭರಿಸಲು ಇದ್ದ 40 ಲಕ್ಷದ ಆಸ್ತಿ ಮಾರಾಟ ಮಾಡಿ ಭರಿಸಿದ್ದಾಗಿ ಸ್ವತಃ ಮಲ್ಲಪ್ಪ ಆಜೂರ ಕಳವಳ ವ್ಯಕ್ತ ಪಡಿಸಿದ್ದಾರೆ.

Edited By : Ashok M
PublicNext

PublicNext

22/10/2024 09:14 am

Cinque Terre

16.41 K

Cinque Terre

0

ಸಂಬಂಧಿತ ಸುದ್ದಿ