ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಸ ಚೆಲ್ಲುವ ಸ್ಥಳವಾಯ್ತು ಈಗ ಮಿನಿ ಗಾರ್ಡನ್

ಬೆಳಗಾವಿ : ಬೆಳಗಾವಿ ನಗರದಲ್ಲಿ ಎಲ್ಲಂದರಲ್ಲಿ ಇರುವ ಕಸದ ಸಮಸ್ಯೆಯಿಂದ ಜನರು ಹೈರಾಣಾಗಿದ್ದಾರೆ. ಆದರೆ ಇಲ್ಲಿಯ ಜನರು ಮಾಡಿರುವ ಐಡಿಯಾಗೆ ಶಾಶ್ವತವಾಗಿ ಕಸದ ಸಮಸ್ಯೆಗೆ ಗುಡ್ ಬೈ ಹೇಳಿದ್ದಾರೆ.

ಬೆಳಗಾವಿ ನಗರದ ನ್ಯೂ ವೈಭವ ನಗರದ ಮುಖ್ಯ ರಸ್ತೆಯಲ್ಲಿ ಪ್ರತಿನಿತ್ಯ ಕಸದ ರಾಶಿ ಇರುತಿತ್ತು. ಸಾಕಷ್ಟು ಸಲ ಜಾಗೃತಿ ಮೂಡಿಸಿದರು ಜನ ಕಸ ಬಂದು ಎಸೆಯುತ್ತಿದ್ದರು, ಆದರೆ ಕಸ ಎಸೆದು ಹೋಗುವ ಸ್ಥಳದಲ್ಲಿ ಮಿನಿ ಗಾರ್ಡನ್ ನಿರ್ಮಾಣ ಮಾಡಲಾಗುತ್ತಿದೆ.‌ ಬಿಕೆ ಕಂಗ್ರಾಳಿ ಪಂಚಾಯತಿ ಮತ್ತು ಇನ್ ಕೆ ಫರಿಸ್ತೆ ಫೌಂಡೇಶನ್ ವತಿಯಿಂದ ಕಸದ ರಾಶಿ ಬಿಳುತ್ತಿದ್ದ ಸ್ಥಳದಲ್ಲಿ ಸೌಂದರ್ಯೀಕರಣಕ್ಕೆ ಚಾಲನೆ ನೀಡಲಾಗಿದೆ.‌

ನ್ಯೂ ವೈಭವ ನಗರ ಪ್ರವೇಶದ ಮುಖ್ಯ ರಸ್ತೆ ಇದಾಗಿದ್ದು, ಇದೆ ರಸ್ತೆ ಮೂಲಕ ಮದನಿ ಕಾಲೋನಿ, ಜಟ್ ಫಟ್ ಕಾಲೋನಿ, ಅನ್ಸಾರ್ ಮೊಹಲ್ಲಾಗೆ ಸಂಪರ್ಕ ಕಲ್ಪಿಸುತ್ತೆ. ಸಾಕಷ್ಟು ಜನ ಜಂಗುಳಿಯಿಂದ ಕುಡಿರುವ ಈ ಪ್ರದೇಶದಲ್ಲಿ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಗ್ರಾಮ ಪಂಚಾಯತಿ ಸದಸ್ಯರು ಮನವಿ ಮಾಡಿಕೊಂಡು ಅನುದಾನ ಬಿಡುಗಡೆ ಮಾಡಿಸಿದ್ದಾರೆ.

ಜೊತೆಗೆ ಈ ಕೆಸಕ್ಕೆ ಇನ್ ಕೆ ಫರಸ್ತೆ ಫೌಂಡೇಶ ಕೂಡಾ ಕೈಗೊಡಸಿದೆ. ಹಾಗಾಗಿ ಈ ಸ್ಥಳದಲ್ಲಿ ಪೇವರ್ಸ್, ಆಸನಗಳ ವ್ಯವಸ್ಥೆ ಹಾಗೂ ಸಸಿಗಳನ್ನು ನಡೆಲಾಗುತ್ತೆ ಇದರಿಂದ ಇಲ್ಲಿ ಕಸದ ಸಮಸ್ಯೆಗೆ ಗುಡ್ ಬೈ ಹೆಳಬಹುದು ಎಂಬುವುದು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸ್ಥಳೀಯರ ಮಾತಾಗಿದೆ.

ಒಟ್ಟಿನಲ್ಲಿ ಪ್ರತಿನಿತ್ಯ ಸಂಚರಿಸುವ ಜನರಿಗೆ ಇಲ್ಲಿ ಕಸದ ದರ್ಶನವಾಗುತ್ತಿತ್ತು. ಆದರೆ ಈಗ ಸ್ಥಳೀಯರ ಐಡಿಯಾದಿಂದ ನ್ಯೂ ವೈಭವ ನಗರದ ಮುಖ್ಯ ರಸ್ತೆಯಲ್ಲಿ ಬಿಳುವ ಕಸದ ಸಮಸ್ಯೆಗೆ ಪರಿಹಾರ ನೀಡಲಾಗಿದೆ. ಆದರೆ ಸೌಂದರ್ಯೀಕರಣವಾದ ಬಳಿಕ ಜನರು ಕಸ ಎಸೆಯಬಾರದು ಎಂಬುವುದು ಎಲ್ಲರ ಕಳಕಳಿಯಾಗಿದೆ.

ಪ್ರಲ್ಹಾದ ಪೂಜಾರಿ, ಬೆಳಗಾವಿ

Edited By : Suman K
Kshetra Samachara

Kshetra Samachara

22/10/2024 06:53 pm

Cinque Terre

6.04 K

Cinque Terre

0

ಸಂಬಂಧಿತ ಸುದ್ದಿ