ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿರುಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಚಾವಣಿ

ಚಿಕೋಡಿ : ಹುಕ್ಕೇರಿ ತಾಲೂಕಿನ ವಿವಿಧಡೆ ಮಳೆ ಅಕಾಲಿಕ ಮಳೆ ಆರ್ಭಟ ಮುಂದುವರೆದಿದ್ದು ಮಿಂಚು ಸೇರಿದಂತೆ ಬಿರುಗಾಳಿ ಸಹಿತ ಬಾರಿ ಮಳೆಗೆ ಶಾಲೆಯ ಮೇಲ್ಚಾವಣಿ ಹಾರಿ ಹೋಗಿರುವ ಘಟನೆ ಹುಕ್ಕೇರಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದಿದೆ.

ಸೋಮವಾರ ಸಂಜೆ ಗುಡುಗು ಮಿಂಚು ಸಮೇತ ಸುರಿದ ಬಾರಿ ಮಳೆ ಬಿರುಗಾಳಿಗೆ ಹಂಚಿನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಚಾವಣಿ ಹಾರಿ ಹೋಗಿವೆ. ವಿದ್ಯಾರ್ಥಿಗಳು ಶಾಲೆ ಮುಗಿಸಿ ಮನೆಗೆ ಹೋದ ಮೇಲೆ ಈ ಘಟನೆ ಸಂಭವಿಸಿದೆ.

ದಸರಾ ರಜೆಯ ಬಳಿಕ ಶಾಲೆ ಆರಂಭದ ಮೊದಲನೆಯ ದಿನ ಸಾಯಂಕಾಲ ಶಾಲೆಗೆ ಬಿಡುವಾದ ಕಾರಣ ಬಾರಿ ಅನಾಹುತ ತಪ್ಪಿದೆ. ಬಿರುಗಾಳಿಗೆ ಶಾಲೆಯ ಮೇಲಿಂದ ಮೇಲ್ಚಾವಣಿ ಸಂಪೂರ್ಣ ಹಾರಿ ಹೋಗಿ ಶಾಲಾ ಮುಂಭಾಗದಲ್ಲಿ ಬಿದ್ದಿದೆ.

Edited By : Suman K
Kshetra Samachara

Kshetra Samachara

22/10/2024 08:43 pm

Cinque Terre

6.76 K

Cinque Terre

0

ಸಂಬಂಧಿತ ಸುದ್ದಿ