ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ಶ್ರೀ ಕ್ಷೇತ್ರ ಸೊಗಲದ ಶಿವ ಪಾರ್ವತಿಯರ ನೂತನ ಮೂರ್ತಿಗಳ ಭವ್ಯ ಮೆರವಣಿಗೆ

ಬೈಲಹೊಂಗಲ: ಶ್ರೀಕ್ಷೇತ್ರ ಸೊಗಲ ಜೀರ್ಣೋದ್ದಾರ ಸಮಿತಿ ರಚನೆಯಾಗಿ 50 ನೇ ವರ್ಷ ಪೂರೈಸುತ್ತಿರುವ ಸುವರ್ಣ ಮಹೋತ್ಸವ ನೆನಪಿಗಾಗಿ ನ.8 ರಂದು ಅದ್ದೂರಿಯಾಗಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗಲಿದ್ದು, ಶ್ರೀ ಸೋಮೇಶ್ವರ ಹಾಗೂ ಶಿವ-ಪಾರ್ವತಿಯರ ನೂತನ ಮೂರ್ತಿ ಪುನರ್ ಪ್ರತಿಷ್ಠಾಪನೆ ನಿಮಿತ್ಯವಾಗಿ ಭಾನುವಾರ ನೂತನವಾಗಿ ಕಲಾದಗಿ ಗ್ರಾಮದಿಂದ ಕಾರಿಮನಿ ಗ್ರಾಮಕ್ಕೆ ಮೂರ್ತಿಗಳನ್ನು ತಂದು ವಾಸ್ತವ್ಯ ಮಾಡಲಾಯಿತು.ಕಾರಿಮನಿ ಭಕ್ತರಿಂದ ಅನ್ನಪ್ರಸಾದ ನೆರವೇರಿಸಲಾಯಿತು.

ಸೋಮವಾರ ಬೆಳಗ್ಗೆ 9 ಗಂ ಕಾರಿಮನಿ ಗ್ರಾಮದಿಂದ ಕುಂಭಮೇಳ, ಡೊಳ್ಳು, ವಿವಿಧ ವಾದ್ಯ ಮೇಳಗಳೊಂದಿಗೆ ಶ್ರೀ ಕ್ಷೇತ್ರಕ್ಕೆ ಮೂರ್ತಿಗಳನ್ನು ಟ್ರ್ಯಾಕ್ಟರದಲ್ಲಿ ಮೆರವಣಿಗೆ ಮುಖಾಂತರ ಶ್ರೀಕ್ಷೇತ್ರಕ್ಕೆ ತರಲಾಯಿತು.

ಕುಂಭಮೇಳದಲ್ಲಿ ರುದ್ರಾಪೂರ, ಕಾರಿಮನಿ, ದುಂಡನಕೊಪ್ಪ, ಸೊಗಲ, ಮಲ್ಲೂರ, ಹೊಸೂರ, ಇಂಗಳಗಿ, ಮಾಟೊಳ್ಳಿ ಗ್ರಾಮಗಳ ಸು.1000 ಕ್ಕೂ ಹೆಚ್ಚು ಕುಂಭಹೊತ್ತು ಮಹಿಳೆಯರು ಸಾಗಿದರು.

ಸೇವಾ ಸಮಿತಿಯವರು ಈ ಕುರಿತು ಮಾತನಾಡಿ, ಶ್ರೀ ಸೋಮೇಶ್ವರ ಮತ್ತು ಶಿವ-ಪಾರ್ವತಿಯರ ನೂತನ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ, ನೂತನ ಶಿಲಾ ಮಂಟಪ, ದೇವಸ್ಥಾನಗಳ ಮೇಲಚಾವಣಿ ಉದ್ಘಾಟನೆ, ಶ್ರೀ ಕ್ಷೇತ್ರಸೊಗಲ ಜೀರ್ಣೋದ್ದಾರ ಸಮಿತಿಯ 50 ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ನ.4 ರಿಂದ 8 ರವೆರೆಗ ಕ್ಷೇತ್ರದಲ್ಲಿ ಅದ್ದೂರಿಯಾಗಿ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, ಮಠಾದೀಶರು, ವಿವಿಧ ಗಣ್ಯರು ಆಗಮಿಸಲಿದ್ದಾರೆ ಎಂದರು. ಈ ವೇಳೆ ಶ್ರೀಕ್ಷೇತ್ರಸೊಗಲ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು, ಆಡಳಿತ ಮಂಡಳಿಯವರು, ಸುತ್ತಲಿನ ಗ್ರಾಮಗಳ ಗುರು-ಹಿರಿಯರು, ಭಕ್ತರು, ಸಿಬ್ಬಂದಿ ವರ್ಗದವರು ಸಾಥ ನೀಡಿದರು.

Edited By : PublicNext Desk
Kshetra Samachara

Kshetra Samachara

21/10/2024 06:59 pm

Cinque Terre

6.46 K

Cinque Terre

0

ಸಂಬಂಧಿತ ಸುದ್ದಿ