ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ನೇಗಿನಹಾಳದಲ್ಲಿ ಕಿತ್ತೂರು ಚೆನ್ನಮ್ಮನ ಜ್ಯೋತಿಯಾತ್ರೆಗೆ ಅದ್ದೂರಿ ಸ್ವಾಗತ.

ಬೈಲಹೊಂಗಲ: ವೀರಮಾತೆ ರಾಣಿ ಕಿತ್ತೂರು ಚೆನ್ನಮ್ಮಾಜಿಯು 1824ರಲ್ಲಿ ಬ್ರಿಟಿಷರೊಂದಿಗೆ ಹೋರಾಡಿ ಬ್ರಿಟಿಷ್ ಅಧಿಕಾರಿ ಧಾರವಾಡದ ಕಲೆಕ್ಟರ್ ಠ್ಯಾಕರೆ ಅನ್ನು ಯುದ್ದದಲ್ಲಿ ಗುಂಡಿಕ್ಕಿ ಕೊಂದು ಹಿಮ್ಮೆಟಿಸಿದ ಸವಿ ನೆನಪಿಗಾಗಿ ಪ್ರತಿವರ್ಷ ವಿಜಯೋತ್ಸವ ಮಾಡುತ್ತಾ ಬರುತ್ತಿದ್ದು, ಇಗ 200ವರ್ಷಗಳು ಗತಿಸಿದೆ. ಅದರ ಸವಿ ನೆನಪಿಗಾಗಿ ರಾಜ್ಯಾದ್ಯಂತ ಅದ್ದೂರಿಯಾಗಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಚೆನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಅವರು ನೇಗಿನಹಾಳ ಗ್ರಾಮದ ವಿಠ್ಠಲ-ರುಕ್ಮಿಣಿ ಮಂದಿರದ ಸಭಾಭವನದ ಮುಂದೆ ಚೆನ್ನಮ್ಮನ ಜ್ಯೋತಿ ಯಾತ್ರೆಯ ರಥಕ್ಕೆ ಸ್ವಾಗತ ಕೋರಿ ಪೂಜೆ ಸಲ್ಲಿಸಿ ಮಾತನಾಡಿದರು. ನಮ್ಮ ನಾಡು ವೀರತ್ವದ ಗುಣ ಹೊಂದಿದೆ ಇಲ್ಲಿ ಶರಣಾಗತಿ ಬೇಡಿ ಬಂದವರಿಗೆ ರಕ್ಷಣೆ ನೀಡಿ ದಾಸೋಹ ಮಾಡಿದೆ. ದಂಡೆದ್ದು ಬಂದವರಿಗೆ ಸೋಲಿನ ರುಚಿ ತೋರಿಸಿ ಹಿಮ್ಮೆಟಿಸಿದೆ ಹೀಗಾಗಿ ಈ ವರ್ಷದ ಉತ್ಸವ ಅತ್ಯಂತ ಅದ್ದೂರಿಯಾಗಿ ನಡೆಯುತ್ತಿದೆ ಎಂದರು.

ಮೆರವಣಿಗೆಯಲ್ಲಿ ಮಹಿಳೆಯರು ಕೊರಳಲ್ಲಿ ಡೊಳ್ಳುಗಳ ಹಾಕಿಕೊಂಡು ಬಾರಿಸಿ ಚನ್ನಮ್ಮನ ಅಭಿಮಾನ ಮೆರೆದರು. ಬ್ಯಾಂಡ್, ಹಾಗೂ ವಿವಿಧ ಸಂಸ್ಕೃತಿ ತಂಡಗಳು ಭಾಗವಹಿಸಿದ್ದು ಪ್ರತಿಯೊಬ್ಬರೂ ತೆಲೆಗೆ ಹಳದಿ ಪೇಟ ಧರಿಸಿ ಮೆರವಣಿಗೆಯ ಅಂದ ಹೆಚ್ಚಿದರು.

ಈ ಸಂದರ್ಭದಲ್ಲಿ ಬೈಲಹೊಂಗಲ ತಹಶೀಲ್ದಾರ್ ಹನುಮಂತ ಶಿರಹಟ್ಟಿ, ಬಸವರಾಜ ಹುಬ್ಬಳ್ಳಿ, ಬಸವರಾಜ ಕೆರಕನ್ನವರ, ಯುವ ಧುರೀಣ ನಾನಾಸಾಹೇಬ ಪಾಟೀಲ, ಕಾಶಿನಾಥ ಇನಾಮದಾರ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಮಹಾದೇವಿ ಕೋಟಗಿ, ಶಿವಾನಂದ ದಿವಾಣದ, ಶ್ರೀಕಾಂತ ಹಡಗಿನಹಾಳ, ಮಹಾದೇವ ಮಡಿವಾಳರ, ಸುಭಾಷ ರುಮೋಜಿ, ಶಿವಾಜಿ ಮುತ್ತಗಿ, ಪ್ರಲ್ಹಾದ ಘಂಟಿ, ಮಹಾಂತೇಶ ದಿವಾಣದ, ಬಸವರಾಜ ಪೂಜೇರಿ, ಬಸನಗೌಡ ಪಾಟೀಲ ಹಾಗೂ ಗ್ರಾಮ ಪಂಚಾಯತಿ ಸದಸ್ಯರು, ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತರು, ಶಾಲಾ-ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು, ನೂರಾರು ಜನ ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

21/10/2024 06:46 pm

Cinque Terre

5.06 K

Cinque Terre

0

ಸಂಬಂಧಿತ ಸುದ್ದಿ