ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ಚೆನ್ನಮ್ಮನ ವೀರಜ್ಯೋತಿ ರಥಯಾತ್ರೆಗೆ ಅದ್ದೂರಿ ಬೀಳ್ಕೊಡುಗೆ

ಬೈಲಹೊಂಗಲ: ನಮ್ಮ ನಾಡು ನುಡಿ ಹಾಗೂ ಸಂಸ್ಕ್ರತಿಯ ಪ್ರತೀಕವಾಗಿದ್ದು, ವೀರ ರಾಣಿ ಕಿತ್ತೂರ ಚನ್ನಾಮ್ಮಾಜಿಯ ಚರಿತ್ರೆ ಪ್ರತಿಯೊಬ್ಬರಿಗೂ ತಿಳಿಯುವಂತಾಗಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಅವರು ಮಂಗಳವಾರ ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಸಮಾಧಿ ಸನಿಹ ಕಿತ್ತೂರು ಉತ್ಸವ-2024 ಹಾಗೂ 200 ನೇ ವಿಜಯೋತ್ಸವ ಅಂಗವಾಗಿ ವೀರಜ್ಯೋತಿ ರಥ ಯಾತ್ರೆ ಬೀಳ್ಕೊಟ್ಟು ಮಾತನಾಡಿ, ಕಿತ್ತೂರು ಉತ್ಸವದಲ್ಲಿ ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕೆಂದರು.

ಸಡಗರ ಸಂಭ್ರಮದ ವಾತವರಣದಲ್ಲಿ ಡೊಳ್ಳು, ಭಜನೆ, ಸುಮಂಗಲೆಯರು ಹೊತ್ತ ಕುಂಭ ಕೊಡಗಳ ದೃಶ್ಯ, ಶಾಲಾ ಕಾಲೇಜು ವಿದ್ಯಾರ್ಥಿಗಳು ನಡಿಗೆ ಆಕರ್ಷಣೀಯವಾಗಿತ್ತು. ಜ್ಯೋತಿ ಯಾತ್ರೆಯು ಚೆನ್ನಮ್ಮಾಧಿ ರಸ್ತೆ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತ, ಬಸ್ ನಿಲ್ದಾಣ, ಎಪಿಎಂಸಿ ರಸ್ತೆಯಿಂದ ಅನಿಗೋಳ ಮಾರ್ಗವಾಗಿ ಕಿತ್ತೂರು ಕಡೆ ಪ್ರಯಾಣ ಬೆಳೆಸಿತು.

Edited By : Ashok M
PublicNext

PublicNext

22/10/2024 12:14 pm

Cinque Terre

11.93 K

Cinque Terre

0

ಸಂಬಂಧಿತ ಸುದ್ದಿ