ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: "ಪ್ರವಾಸೋದ್ಯಮ ಉಳಿಸಿ, ಬೆಳೆಸಲು ಸರ್ವ ಪ್ರಯತ್ನ"- ಸಚಿವ ಮಂಕಾಳ ವೈದ್ಯ

ಕಾರವಾರ: ನಮ್ಮ ಆಡಳಿತದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಹಿಂದೆಯೂ ಆಗಿದೆ. ಮುಂದೆಯೂ ಆಗುತ್ತದೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.

ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಸಚಿವ ಮಂಕಾಳ ವೈದ್ಯ, ಪ್ರವಾಸೋದ್ಯಮ ಬೆಳೆಯಲು ಬಿಡುತ್ತಿಲ್ಲ ಎಂದು ಸುದ್ದಿ ಹಬ್ಬಿದೆ. ಹೀಗಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ. ಜಿಲ್ಲೆಯಲ್ಲಿ ನಿರುದ್ಯೋಗ ನಿವಾರಿಸಲು ಪ್ರವಾಸೋದ್ಯಮ ಬೆಳೆಯಬೇಕು. ಅದಕ್ಕೆ ಅವಕಾಶ ನೀಡಲಾಗಿದೆ. ಆದರೆ, ಟೋಪಿ ಹಾಕುವವರಿಗೆ ಅವಕಾಶವಿಲ್ಲ ಎಂದರು.

ಮುರುಡೇಶ್ವರದಲ್ಲಿ 360 ಕೋಟಿ ರೂಪಾಯಿ ವೆಚ್ಚದಲ್ಲಿ ಬಂದರು ನಿರ್ಮಿಸಲಾಗುತ್ತಿದೆ. ಅದರಿಂದ ಮೀನುಗಾರಿಕೆಗಿಂತ ಪ್ರವಾಸೋದ್ಯಮ ಬೆಳೆಯುತ್ತದೆ. ಅದರಲ್ಲಿ ಹೌಸ್‌ಬೋಟ್‌ಗಳು ಬರಲಿದ್ದು, ಎರಡು ದಿನಗಳು ಸಮುದ್ರದಲ್ಲಿಯೇ ಇರಬಹುದು. 1,500 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರೂಸ್ ಬೋಟ್ ನಿಲ್ಲಲು ಉತ್ತಮ ಬಂದರನ್ನು ಮಂಗಳೂರಿನಲ್ಲಿ ನಿರ್ಮಿಸಲಾಗುತ್ತಿದೆ. ಪ್ರವಾಸೋದ್ಯಮ ಉಳಿಸಿ, ಬೆಳೆಸಲು ಸರ್ವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

Edited By : Nagesh Gaonkar
PublicNext

PublicNext

19/10/2024 10:06 pm

Cinque Terre

26.72 K

Cinque Terre

0

ಸಂಬಂಧಿತ ಸುದ್ದಿ