ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ‌‌: "ಮುಡಾದಲ್ಲಿ ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿಲ್ಲವೆಂದಾದರೆ ನಿವೇಶನ ಏಕೆ ವಾಪಸ್ ಕೊಟ್ಟರು?"

ಕೋಲಾರ‌‌: ಕೇಂದ್ರ ಸರ್ಕಾರದಿಂದ Ed ಬಳಕೆ ಆರೋಪಕ್ಕೆ ಕೋಲಾರದಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ ಕಾಂಗ್ರೆಸ್ ಗೆ ಟಾಂಗ್ ಕೊಟ್ಟಿದ್ದಾರೆ. ಕೋಲಾರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ 14 ನಿವೇಶನಗಳಿಗೆ ತಮಗೆ ಸಂಬಂಧವಿಲ್ಲವೆಂದು ಹೇಳಿದವರು, ನಂತರ‌ 65 ಕೋಟಿ ಕೊಟ್ಟರೆ ಬಿಟ್ಟು ಕೊಡುವುದಾಗಿ ಹೇಳಿದರು.

ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಮುಡಾ ಡಿನೋಟಿಫಿಕೇಷನ್ ಆಗುವಂತಹ ಸಂದರ್ಭದಲ್ಲಿ ಎಸ್ಸಿ ಭೂಮಿಯನ್ನು ಕಾನೂನು ಬಾಹಿರವಾಗಿ‌ ಪ್ರಭಾ‌ವ ಬೀರಿ ತಮ್ಮ ಬಾಮೈದುನನಿಗೆ ಮಾಡಿದರು. ನಂತರ ದೇವರಾಜ್ ಅವರ ಮುಖಾಂತರ ಸಿದ್ದರಾಮಯ್ಯ ಅವರ ಪತ್ನಿ ಹೆಸರಿಗೆ ಮಾಡಿಸಿಕೊಂಡರು‌. ಇದರಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರವಿಲ್ಲವಾ!?

ಮುಡಾ ದಾಖಲೆಗಳಲ್ಲಿ ವೈಟ್ ಲೆಡ್ ಹಾಕಿ ದಾಖಲೆ ತಿರುಚಿದವರು‌ ಯಾರು? ಎಂದು ಪ್ರಶ್ನಿಸಿದ ಮುನಿಸ್ವಾಮಿ, ಮುಡಾದಲ್ಲಿ ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿಲ್ಲವೆಂದಾದರೆ ನಿವೇಶನಗಳನ್ನು ಏಕೆ ವಾಪಸ್ ಕೊಟ್ಟರು! ಮುಡಾದಲ್ಲಿ 5 ಸಾವಿರ ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿದ್ದು, ಮುಡಾದಲ್ಲಿ ಭ್ರಷ್ಟಾಚಾರ ಆಗಿರುವ ಕಾರಣ ಅದರ ಅಧ್ಯಕ್ಷ ಮರೀಗೌಡ‌ ರಾಜೀನಾಮೆ ಕೊಟ್ಟಿದ್ದು, ಭ್ರಷ್ಟಾಚಾರ ನಡೆದಿಲ್ಲವೆಂದಾದರೆ ಅವರು ಏಕೆ ರಾಜೀನಾಮೆ ಕೊಟ್ಟರು? ಈ ಬಗ್ಗೆ Ed ತನಿಖೆ ಮಾಡುವುದರಲ್ಲಿ ತಪ್ಪೇನಿದೆ ಎಂದರು.

ಇನ್ನು, ವಾಲ್ಮೀಕಿ ಹಗರಣದಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಒಪ್ಪಿಕೊಂಡು ಸಚಿವ ನಾಗೇಂದ್ರ ರಾಜೀನಾಮೆ ‌ನೀಡಿಲ್ಲವಾ? ನಕಲಿ ಕೋ ಆಪರೇಟಿವ್ ಸೊಸೈಟಿಗಳಲ್ಲಿ ಓಪನ್ ಹಣ ವರ್ಗಾವಣೆ ಮಾಡಿದರು. ಇಷ್ಟೆಲ್ಲಾ ನಡೆದರೂ ರಾಜೀನಾಮೆ ನೀಡದೆ ಆಟವಾಡುತ್ತಿರುವ ಸಿದ್ದರಾಮಯ್ಯನವರೇ, ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಕಿಡಿಕಾರಿದರು.

Edited By : Nagesh Gaonkar
PublicNext

PublicNext

19/10/2024 08:13 pm

Cinque Terre

36.58 K

Cinque Terre

1

ಸಂಬಂಧಿತ ಸುದ್ದಿ