ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಮೊಬೈಲ್ ಮುಖಾಂತರ ಮಕ್ಕಳಿಗೆ ಹೋಮ್ ವರ್ಕ್, ರೈತ ಸಂಘ ಪ್ರತಿಭಟನೆ

ಕೋಲಾರ : ಮೊಬೈಲ್ ಮುಖಾಂತರ ಮಕ್ಕಳಿಗೆ ಹೋಮ್ ವರ್ಕ್ ನೀಡಿ ಆರೋಗ್ಯವನ್ನು ಹದಗೆಡಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದಿಂದ ಶಿಕ್ಷಣ ಇಲಾಖೆಯ ಎದುರು ಮೊಬೈಲ್‍ಗಳ ಸಮೇತ ಹೋರಾಟ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಸಾವಿಲ್ಲದ ಮನೆಯಲ್ಲಿ ಸಾಸಿವೆ ಕಾಳು ತಾರಮ್ಮ ಎಂಬ ಗಾದೆಯಂತೆ ಮೊಬೈಲ್ ಇಲ್ಲದೇ ಮಕ್ಕಳ ವಿದ್ಯಾಭ್ಯಾಸ ಇಲ್ಲದಂತಾಗಿದೆ ಇಂದಿನ ಶಿಕ್ಷಣ ವ್ಯವಸ್ಥೆ. ಲಕ್ಷ ಲಕ್ಷ ಡೊನೇಶನ್ ಪಡೆದು ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡಬೇಕಾದ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು ಹೋಮ್ ವರ್ಕ್ ಹೆಸರಿನಲ್ಲಿ ಮಕ್ಕಳಿಗೆ ಮೊಬೈಲ್ ಎಂಬ ಮಹಾ ಪಿಡುಗಿಗೆ ಮಕ್ಕಳ ಭವಿಷ್ಯವನ್ನು ನೀಡುವ ಮುಖಾಂತರ ಹಾದಿ ತಪ್ಪಲು ನೇರವಾಗಿ ಕುಮ್ಮಕ್ಕು ನೀಡುವ ಜೊತೆಗೆ ಮೊಬೈಲ್ ಕಂಪನಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವ ಸಂಶಯವನ್ನು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಝೆರಾಕ್ಸ್ ಮಾಡಲು ಯಂತ್ರೋಪಕರಣಗಳು ಇಲ್ಲದಿದ್ದರೆ ಹೇಳಿಬಿಡಲಿ, ಪೋಷಕರೇ ಪ್ರತಿ ಶಾಲೆಗೆ ತಲಾ 10 ಯಂತ್ರಗಳನ್ನು ಉಚಿತವಾಗಿ ನೀಡುತ್ತೇವೆ.

ನಮ್ಮ ಮಕ್ಕಳಿಗೆ ಮೊಬೈಲ್‍ನ ಲ್ಲಿ ಹೋಮ್ ವರ್ಕ್ ಬೇಡ. ಝೆರಾಕ್ಸ್ ಪ್ರತಿಗಳು ನೀಡುವ ಮುಖಾಂತರ ಮಕ್ಕಳ ಆರೋಗ್ಯ ರಕ್ಷಣೆ ಮಾಡಲಿ ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗವಾದಿ ನಾಗರಾಜಗೌಡ, ಸುಪ್ರೀಂ ಚಲ, ಚಂದ್ರಪ್ಪ, ಶಶಿಕುಮಾರ್, ಯಲ್ಲಣ್ಣ, ಹರೀಶ್, ತಾಲೂಕು ಅಧ್ಯಕ್ಷ ಶಿವಾರೆಡ್ಡಿ, ರತ್ನಮ್ಮ, ಗೌರಮ್ಮ, ವೆಂಕಟಲಕ್ಷ್ಮಿ, ಕಾಂತಮ್ಮ ಮುಂತಾದವರಿದ್ದರು.

Edited By : Ashok M
PublicNext

PublicNext

19/10/2024 01:45 pm

Cinque Terre

24.04 K

Cinque Terre

0

ಸಂಬಂಧಿತ ಸುದ್ದಿ