ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ನೌಕರರ ಸಂಘದ ಚುನಾವಣೆ

ಶ್ರೀನಿವಾಸಪುರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ಚುನಾವಣಾ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿತ್ತು. ಹಲವರು ನಿರ್ದೇಶಕರ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದರು.

ತಾಲ್ಲೂಕು ಸಂಘದ 32 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಬೈರೇಗೌಡ,ಕಲಾಶಂಕರ್,ಶಂಕರಪ್ಪ, ಮುನಿಲಕ್ಷ್ಮಮ್ಮ, ವೆಂಕಟರಮಣ, ಶ್ರೀರಾಮೇಗೌಡ, ಶ್ರೀನಿವಾಸಯ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಸ್ಥಾನಕ್ಕೆ ಮುನಿವೆಂಕಟಪ್ಪ ಹಾಗೂ ಆರೋಗ್ಯ ಇಲಾಖೆಯಿಂದ ಡಾಕ್ಟರ್ ಶ್ರೀನಿವಾಸ್ ನಾಮಪತ್ರ ಸಲ್ಲಿಕೆ ಮಾಡಿದರು.‌

ಇದೇ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ ನಂತರ ಮಾತನಾಡಿದ ಅಭ್ಯರ್ಥಿ ಬೈರೇಗೌಡ ಮಾತನಾಡಿ 2013 ರಿಂದ ಇಂದಿನವರೆಗೆ ಪ್ರೌಢಶಾಲಾ ನಿರ್ದೇಶಕನಾಗಿ ಎರಡು ಅವಧಿಯಲ್ಲಿ ಸೇವೆ ಸಲ್ಲಿಸಿದ್ದೇನೆ ನನಗೆ ಮತದಾನ ಮಾಡಿ. ನಿರ್ದೇಶಕನಾಗಿ ಆಯ್ಕೆ ಮಾಡಿದ ಎಲ್ಲ ಮತದಾರರಿಗೂ ಧನ್ಯವಾದ ತಿಳಿಸಿ. ಆದರೆ ಈ ಚುನಾವಣೆಯಲ್ಲಿ ನನ್ನ ಹೆಸರನ್ನು ಪ್ರಾಥಮಿಕ ಶಾಲಾ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಎರಡು ಅವಧಿಗೆ ಪ್ರೌಢಶಾಲಾ ವಿಭಾಗದಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರೂ ಸಹ ಕೆಲವರು ಕದ್ದು ಮುಚ್ಚಿ ಅನ್ಯ ಮಾರ್ಗದ ಮುಖಾಂತರ ಪ್ರಾಥಮಿಕ ಶಾಲಾ ಮತದಾರರ ಪಟ್ಟಿಯಲ್ಲಿ ಸೇರಿಸಿದ್ದಾರೆ. ಇದರಲ್ಲಿ ಮತದಾರರ ಪ್ರಭುಗಳೇ ಉತ್ತರ ನೀಡುತ್ತಾರೆ. ಮುಂದಿನ ದಿನಗಳಲ್ಲಿ ಉತ್ತಮವಾದಂತಹ ಸಂಘ ಸದೃಢವಾಗಿ ನಡೆಯುತ್ತದೆ ಎಲ್ಲಾ ಇಲಾಖೆಗಳಿಂದ ಉತ್ತಮವಾದಂತಹ ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗುತ್ತಾರೆಂದು ಎಲ್ಲ ಮತದಾರರ ಪ್ರಭುಗಳು ಯಾರು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ ಹಾಗೂ ಯಾರು ಅರ್ಹರಿದ್ದಾರೆ ಎಂಬುದನ್ನು ಗುರುತಿಸಿ ಮತದಾನ ಮಾಡಿ ಎಂದು ಸಹ ಮನವಿ ಮಾಡಿದರು.

Edited By : Manjunath H D
PublicNext

PublicNext

18/10/2024 08:55 pm

Cinque Terre

28.26 K

Cinque Terre

0

ಸಂಬಂಧಿತ ಸುದ್ದಿ