ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : "ನಿಮ್ಮ ನ್ಯಾಯಯುತ ಬೇಡಿಕೆ 2 ತಿಂಗಳ ಒಳಗೆ ಬಗೆಹರಿಸಲಾಗುತ್ತದೆ"- ಶಾಸಕ ಸಮೃದ್ದಿ ಮಂಜುನಾಥ್

ಮುಳಬಾಗಿಲು: ತಾಲೂಕಿನ ತಾಲೂಕು ಆಡಳಿತ ಕಚೇರಿಯ ಮುಂದೆ ದಲಿತ ಸಂಘರ್ಷ ಸಮಿತಿ ಸಂಯೋಜಕ ವತಿಯಿಂದ ಇಂದು ಅಧಿಕಾರಿಗಳೇ, ಬಡ ರೈತರ ಕೆಲಸ ಮಾಡಿ ಕೊಡಿ. ಇಲ್ಲವಾದರೆ ಸೀಟು ಬಿಡಿ ಎಂಬ ವಿವಿಧ ಬೇಡಿಕೆಗಳ ಕುರಿತಂತೆ ಅನಿರ್ದಿಷ್ಟಾವಧಿ ಹೋರಾಟಕ್ಕೆ ಚಾಲನೆಯನ್ನು ನೀಡಿದ್ದರು.‌

ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರೊಂದಿಗೆ ಧರಣಿಯನ್ನು ಸತತವಾಗಿ 3 ದಿನಗಳು ಹಗಲು ಇರುಳು ಗಾಳಿ, ಮಳೆ, ಚಳಿಯನ್ನು ಲೆಕ್ಕಿಸದೆ ನಿರಂತರ ಧರಣಿಯನ್ನು ಮುಂದುವರೆಸಲು ನಿರ್ಧರಿಸಿದ್ದರು.‌ ಶಾಸಕ ಸಮೃದ್ಧಿ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರಿಗೆ ಭರವಸೆಯನ್ನು ನೀಡಿದರು.

ಕಳೆದ ಮೂರು ದಿನಗಳಿಂದ ದಸಂಸ ಸಂಘಟನೆ ತಾಲೂಕಿನ ಆಡಳಿತ ಕಚೇರಿ ಮುಂದೆ ಧರಣಿ ನಡೆಸುತ್ತಿದ್ದು, ನಿಮ್ಮ ನ್ಯಾಯಯುತ ಬೇಡಿಕೆಗಳನ್ನು 2 ತಿಂಗಳ ಒಳಗಾಗಿ ಹಂತ ಹಂತವಾಗಿ ಬಗೆಹರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಧರಣಿಯನ್ನು ಇಂದಿಗೇ ಮುಕ್ತಾಯಗೊಳಿಸಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಮೆಕ್ಯಾನಿಕ್ ಶ್ರೀನಿವಾಸ್, ಜಿಲ್ಲಾ ಮುಖಂಡ ಕೀಲುಹೊಳಲಿ ಸತೀಶ್, ಗಣೇಶ್ ಪಾಳ್ಯ ಕಿಟ್ಟ , ಕಲಾವಿದ ಮುಖಂಡ ಗುಜ್ಜಮಾರಂಡಹಳ್ಳಿ ಜಗದೀಶ್, ಕಪ್ಪಲಮಡುಗು ಅಶೋಕ್, ರೆಡ್ಡಿ ಹಳ್ಳಿ ಅಭಿ, ರೈತ ಮಿತ್ರ ಸಂಘಟನೆಯ ಬಾಲಕೃಷ್ಣ , ಬಂಡಹಳ್ಳಿ ಶ್ರೀರಾಮಪ್ಪ, ಬಲ್ಲಾ ಸೋಮು, ಜಗನ್ ,ಮಣಿ ,ಆಂಜಿ , ಹೊಸಕೆರೆ ರಘು, ಸಿದ್ಧಘಟ್ಟ ರವಿ,ನಾರಾಯಣಮ್ಮ, ಕನ್ನಸಂದ್ರ ಪದ್ಮಮ್ಮ, ಈರಪ್ಪ, ವೆಂಕಟ್ರಾಮಪ್ಪ, ರಾಜಪ್ಪ,ಮಿನಿ ಗದ್ದರ್ ಶ್ರೀನಿವಾಸ್ ಹಾಗೂ ಮುಖಂಡರಾದ ಡಾ.ಪ್ರಕಾಶ್, ರಘುಪತಿ ರೆಡ್ಡಿ,NRS ಸತ್ಯಣ್ಣ ಸೇರಿದಂತೆ ತಾಲೂಕಿನ ಹಲವಾರು ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.

Edited By : Shivu K
PublicNext

PublicNext

18/10/2024 07:15 am

Cinque Terre

22.96 K

Cinque Terre

0

ಸಂಬಂಧಿತ ಸುದ್ದಿ