ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೌರ್ಯ ತಂಡದ ಸ್ವಯಂ ಸೇವಕರಿಗೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ

ಸಿದ್ದಾಪುರ:  ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿ ಸಿದ್ದಾಪುರ ಇದರ  ತಾಲೂಕ ಸ್ವಯಂಸೇವಕರಿಗೆ  ವಾರ್ಷಿಕ ತರಬೇತಿ ಜೀವ  ರಕ್ಷಣಾ ಕೌಶಲ್ಯ ತರಬೇತಿ ಪಟ್ಟಣದಲ್ಲಿ ನಡೆಯಿತು. ಜಿಲ್ಲಾ ನಿರ್ದೇಶಕ ಎ ಬಾಬು ಉದ್ಘಾಟಿಸಿ ನೂತನವಾಗಿ ಆಯ್ಕೆಯಾದ ಸ್ವಯಂಸೇವಕರಿಗೆ ಸಮವಸ್ತ್ರ ವಿತರಿಸಿ ಮಾತನಾಡಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳುವ ಸ್ವಯಂಸೇವಕರು ಶಿಸ್ತು ಮತ್ತು ಸಮಯ ಪ್ರಜ್ಞೆ ರೂಢಿಸಿಕೊಳ್ಳಬೇಕು. ಪೂಜ್ಯರು ಶಿಸ್ತು ಮತ್ತು ಸಮಯ ಪ್ರಜ್ಞೆಗೆ ಮಾದರಿ. ಅವರ ಆಶೀರ್ವಾದದಲ್ಲಿ ನಡೆಸುವ ಶೌರ್ಯ ತಂಡದ ಸದಸ್ಯರು ಕೂಡ ಶಿಸ್ತು 

 ರೂಢಿಸಿಕೊಳ್ಳಬೇಕು ಎಂದ ಅವರು ಅಗ್ನಿಶಾಮಕ, ಪೊಲೀಸ್ ಇಲಾಖೆಗೆ ಸಹಕಾರ ನೀಡುವಂತೆ ಸ್ವಯಂಸೇವಕರು ತಯಾರಾಗಬೇಕು.ಸಮಯ ಬಂದಾಗ ತರಬೇತಿಯಲ್ಲಿ ಕಲಿತ ವಿದ್ಯೆಯನ್ನು ಅನುಷ್ಠಾನಕ್ಕೆ ತರಬೇಕು. ಸ್ವಯಂಸೇವಕರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕು. . ಸ್ವಯಂಸೇವಕರು ದುಶ್ಚಟ, ದುರಭ್ಯಾಸ ಹೊಂದಿರಬಾರದು ಎಂದರು.

ಉಷಾ ಫೈರ್ ಸೇಫ್ಟಿ ಕಂಪನಿಯ ತರಬೇತಿದಾರ ಸಂತೋಷ ಪೀಟರ್ ಡಿಸೋಜ ರವರು ಸ್ವಯಂಸೇವಕರಿಗೆ ಪ್ರಥಮ ಚಿಕಿತ್ಸಾ ವಿಧಾನಗಳು, ಬೆಂಕಿ ಅವಗಢ ನಿರ್ವಹಣಾ ವಿಧಾನಗಳು, ಅಗ್ನಿ ನಂದಕಗಳ ವಿಧಗಳು, ಅಗ್ನಿ ನಂದಕದ ಬಳಕೆ, ರಸ್ತೆ ಅಪಘಾತದಲ್ಲಿ ಕೈಗೊಳ್ಳುವ ಮುನ್ನೆಚ್ಚರಿಕೆ, ಪ್ರಥಮ ಚಿಕಿತ್ಸೆ, ಅಂಬುಲೆನ್ಸ್ ಕರೆಸುವ ವಿಧಾನ, ಗಾಯಾಳುಗಳನ್ನು ಕೊಂಡೊಯ್ಯುವ ವಿಧಾನ ಇತ್ಯಾದಿ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಿದರು.

ಹಾರ್ಸಿಕಟ್ಟಾ, ಕಾನಸೂರು, ಕಾವಂಚೂರು, ಕ್ಯಾದಗಿ, ತಾಳಗುಪ್ಪ, ಸಿದ್ದಾಪುರ, ಕಾರ್ಗಲ್  ಭಾಗದ ಸುಮಾರು 92  ಸ್ವಯಂಸೇವಕರು ತರಬೇತಿಯಲ್ಲಿ ಹಾಜರಿದ್ದು ತರಬೇತಿ ಪಡೆದರು.

ತಾಲ್ಲೂಕು ಯೋಜನಾಧಿಕಾರಿ ಗಿರಿಶ್ ಪಾವಸ್ಕರ್, ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ್, ಶೌರ್ಯ ಘಟಕದ ಮಾಸ್ಟರ್ ಚಂದ್ರಶೇಖರ್, ಕ್ಯಾಪ್ಟನ್ ಮಂಜುನಾಥ ತರಬೇತಿದಾರ ದಿನೇಶ್, ಸಂಯೋಜಕರು, ಘಟಕ ಪ್ರತಿನಿಧಿಗಳು, ವಲಯದ ಮೇಲ್ವಿಚಾರಕರು ಉಪಸ್ಥಿತರಿದ್ದರು. 

Edited By : PublicNext Desk
Kshetra Samachara

Kshetra Samachara

18/10/2024 09:13 pm

Cinque Terre

3.02 K

Cinque Terre

0

ಸಂಬಂಧಿತ ಸುದ್ದಿ