ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರ: ಅಕ್ರಮ ಸರಾಯಿ ಮಾರಾಟ ನಿಯಂತ್ರಣವಾಗದಿದ್ದರೆ ಹೋರಾಟ

ಸಿದ್ದಾಪುರ : ತಾಲೂಕಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮಧ್ಯ ಮಾರಾಟ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ನಾಡದೇವಿ ಜನಪರ ವೇದಿಕೆ  ವತಿಯಿಂದ ಅಕ್ಟೋಬರ್ 20ರ ಸೋಮವಾರದಂದು ದೊಡ್ಮನೆ  ಗ್ರಾಮ ಪಂಚಾಯಿತಿಗೆ ಮನವಿ ನೀಡುವ ಮೂಲಕ ಹೋರಾಟವನ್ನು ಪ್ರಾರಂಭಿಸಲಿದ್ದೇವೆ ಎಂದು ಸಂಘಟನೆಯ ಮುಖ್ಯಸ್ಥ ಅನಿಲ್ ಕೊಠಾರಿ ತಿಳಿಸಿದರು.

ಅವರು ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದರು.

ಈಗಾಗಲೇ ಗಾಂಧಿ ಜಯಂತಿ ಆಚರಣೆ ಆಗಿದೆ ಗಾಂಧಿ ಜಯಂತಿ ಎಂದರೆ ಕೇವಲ ಅಕ್ಟೋಬರ್ ಎರಡಕ್ಕೆ ಮಾತ್ರ ಮಾಡಿ ಮುಗಿಸುವುದು ಅಲ್ಲ, ಗಾಂಧೀಜಿಯವರು  ಸತ್ಯ ಅಹಿಂಸೆ ಶಾಂತಿಯಿಂದ  ಬಾಳಬೇಕು  ಹಾಗೂ ನಮ್ಮ ದೇಶದಲ್ಲಿ ವ್ಯಸನ ಮುಕ್ತವಾಗಿ ಇರಬೇಕು ಎಂದು   ಆಗಲೇ ಅವರು ಕರೆಕೊಟ್ಟಿದ್ದರು. ನಮ್ಮ ದೇಶ ರಾಮ ರಾಜ್ಯವಾಗಬೇಕೆಂದು ಹೇಳಿದ್ದರು ಆದರೆ ಗಾಂಧೀಜಿಯವರ ಆಸೆ ಕನಸಾಗಿಯೇ ಉಳಿಯಿತು ಬಿಟ್ಟರೆ ಅವರ ಕನಸು ನನಸಾಗಲಿಲ್ಲ 

ಇಂದು ಸರಾಯಿ ವ್ಯಾಪಾರ ಸಕ್ರಮವಾಗಿ ನಡೆಯುತ್ತಿರುವುದಕ್ಕಿಂತ ಹೆಚ್ಚಾಗಿ ಅಕ್ರಮವಾಗಿ ನಡೆಯುತ್ತಿದೆ. ಈ ತಿಂಗಳಿನಿಂದ ನಮ್ಮ ಸಂಘಟನೆಯಿಂದ ರಾಜ್ಯಾದ್ಯಂತ ಅಕ್ರಮ ಸಾರಾಯಿ  ಮಾರಾಟ ನಿಯಂತ್ರಣ ಕ್ಕೆ ಮನವಿ ನೀಡಿ  ಹೋರಾಟ ಪ್ರಾರಂಭಿಸುತ್ತಿದ್ದೇವೆ. 

ಸಿದ್ದಾಪುರ ತಾಲೂಕಿನ ಹಳ್ಳಿಗಳಲ್ಲಿ ಅಕ್ರಮ ಸರಾಯಿ ಮಾರಾಟ ಜೋರಾಗಿ ನಡೆಯುತ್ತಿದೆ. ಅದನ್ನು ಮೊದಲು ಬಂದ್  ಮಾಡಬೇಕೆನ್ನುವುದು ನಮ್ಮ ಮೊದಲನೇ ಹೆಜ್ಜೆ ಆಗಿದೆ. ನಮ್ಮ ತಾಲೂಕಿನಲ್ಲಿ ಅಕ್ರಮ ಸರಾಯಿ ಸಂಪೂರ್ಣ ಬಂದಾದ ನಂತರ ಕರ್ನಾಟಕದ ಉಳಿದ ಭಾಗಗಳಲ್ಲಿ ಹೋರಾಟ ಮಾಡಬೇಕೆಂದಿದ್ದೇವೆ. ನಮ್ಮ ಹಳ್ಳಿಗಳಲ್ಲಿ ಹೇಗೆ ಅಕ್ರಮ ಸಾರಾಯಿ ವ್ಯಾಪಾರ ನಡೆಯುತ್ತಿದೆ ಅಂದರೆ ಒಂದೊಂದು ಹಳ್ಳಿಗಳಲ್ಲಿ ಸಹ ಕನಿಷ್ಠ ನಾಲ್ಕರಿಂದ ಐದು ಜನ ವ್ಯಾಪಾರ ಮಾಡುತ್ತಿದ್ದಾರೆ. ಒಂದು ಪ್ಯಾಕೆಟ್ ಗೆ 20ರೂ  ಇದ್ದಿದ್ದನ್ನು ರೂ.40ಗೆ ಹೀಗೆ ದುಪ್ಪಟ್ಟು ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ನಮ್ಮ ಹಳ್ಳಿಯ ಮಹಿಳೆಯರ ಸಮಸ್ಯೆಗೆ ಕಾರಣವಾಗುತ್ತಿದ್ದಾರೆ. ಈ ಬಗ್ಗೆ ನಾವು ನಮ್ಮ ಸಿದ್ದಾಪುರ ತಾಲೂಕಿನ 23 ಗ್ರಾಮ ಪಂಚಾಯತಿಗಳಲ್ಲಿ ಮನವಿಯನ್ನು ಕೊಟ್ಟು ಹಾಗೆಯೇ ತಹಶೀಲ್ದಾರ್ ಮುಖಾಂತರ ಎಸಿ ಹಾಗೂ ಡಿಸಿ ರವರಿಗೆ ಅಬಕಾರಿ ಸಚಿವರು, ಮುಖ್ಯಮಂತ್ರಿಗಳವರೆಗೂ ಮನವಿ ನೀಡುತ್ತೇವೆ. ನಮ್ಮ ತಾಲೂಕಿನಲ್ಲಿ ಅಕ್ರಮ ಸರಾಯಿ ಸಂಪೂರ್ಣ ಬಂದ್ ಮಾಡಬೇಕೆಂದು ಈ ವರ್ಷದ  ಗಾಂಧಿ ಜಯಂತಿಯ ಅಂಗವಾಗಿ ತೀರ್ಮಾನಿಸಿದ್ದೇವೆ 

 ಸಂಬಂಧಪಟ್ಟ ಇಲಾಖೆ ಅಧಿಕಾರಿ ಸಚಿವರುಗಳಿಗೆ ಮನವಿ ನೀಡಿದರು ಅಕ್ರಮ ಮದ್ಯ ಮಾರಾಟ ನಿಯಂತ್ರಣವಾಗದಿದ್ದರೆ ಪ್ರತಿಭಟನೆ ನಡೆಸಿ ಹೋರಾಟವನ್ನು ಪ್ರಾರಂಭಿಸಬೇಕಾಗುತ್ತದೆ ಎಂದರು ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ದತ್ತಾತ್ರೆಯ ನಾಲಿಗಾರ್, ಜಗದೀಶ್ ಕೋರೆ, ಪ್ರದೀಪ್ ಶೆಟ್ ಮುಂತಾದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

16/10/2024 01:48 pm

Cinque Terre

4.54 K

Cinque Terre

0

ಸಂಬಂಧಿತ ಸುದ್ದಿ