ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಧಾರ್ಮಿಕ ಚೌಕಟ್ಟಿನಲ್ಲಿ ದೈವ ನರ್ತನವಿರಲಿ

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ವೇದಿಕೆ ಸಮಾರಂಭ, ಸಿನಿಮಾ, ಮೆರವಣಿಗೆ ಹಾಗೂ ನಾಟಕಗಳಲ್ಲಿ ದೈವ ವೇಷಭೂಷಣಗಳನ್ನು ತೊಟ್ಟು ಪೂರ್ವಜರ ಕಾಲದಿಂದ ನಂಬಿಕೊಂಡು ಬಂದಿರುವ ದೈವಗಳನ್ನು ಬೀದಿ ಬೀದಿಯಲ್ಲಿ ತಂದು ನಿಲ್ಲಿಸುವಂತಹ ಕಾರ್ಯ ನಡೆಯುತ್ತಿವೆ. ಇದು ನಿಜಕ್ಕೂ ಅಪಮಾನವೆಂದು ದೈವ ನರ್ತಕರು ಹಾಗೂ ದೈವರಾಧಕರು ಆತಂಕ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದ ಕಳಸೇಶ್ವರ ದೇವಸ್ಥಾನದ ಸಭಾಭವನದಲ್ಲಿ ದೈವನರ್ತಕರು ಸಭೆ ನಡೆಸಿ ಈ ಬಗ್ಗೆ ಚರ್ಚಿಸಿದ್ದಾರೆ. ಜಿಲ್ಲೆಯಲ್ಲಿ ಕೇವಲ 11 ಜನ ಮಾತ್ರ ದೈವ ನರ್ತಕರು ಇದ್ದು, ಇನ್ನು ಮುಂದೆ ದೈವ ನರ್ತನೆಯ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಆಯ್ದ ಸ್ಥಳಗಳಲ್ಲಿ ಮಾತ್ರ ನರ್ತನ ಮಾಡಬೇಕೆಂದು ನರ್ತಕರು ನಿರ್ಧಾರ ತೆಗೆದುಕೊಂಡರು. ಅಲ್ಲದೇ ಚೌಕಟ್ಟನ್ನು ಮೀರಿ ಮೆರವಣಿಗೆ ಮನೋರಂಜನೆ ಕಾರ್ಯಕ್ರಮಗಳಲ್ಲಿ ದೈವ ನರ್ತನದ ವೇಷ ತೊಟ್ಟರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಬರಲಾಯಿತು. ಸಾರ್ವಜನಿಕ ಮನೋರಂಜನ ಕಾರ್ಯಕ್ರಮಗಳಲ್ಲಿ ದೈವ ನರ್ತನದ ವೇಷತೊಟ್ಟ ದೃಶ್ಯಗಳನ್ನು ತೋರಿಸಿ ತಿಳಿ ಹೇಳಲಾಯಿತು.

Edited By : Somashekar
PublicNext

PublicNext

18/10/2024 02:25 pm

Cinque Terre

5.82 K

Cinque Terre

0

ಸಂಬಂಧಿತ ಸುದ್ದಿ