ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸೀಗೆ ಹುಣ್ಣಿಮೆಗೆ ಅಡ್ಡಗಟ್ಟಿದ ಹಳ್ಳ ! ರೈತರಿಂದ ನೀರಿಗೆ ಪೂಜೆ ನೈವೇದ್ಯ

ಕುಂದಗೋಳ : ಸೀಗೆ ಹುಣ್ಣಿಮೆ ನಿಮಿತ್ತ ಹೊಲಕ್ಕೆ ಪೂಜೆ ಮಾಡಲು ತೆರಳಿದ ರೈತರು ಹಿರೇಹರಕುಣಿ ಗ್ರಾಮದ ಸೊಟ್ಟ ಹಳ್ಳ ತುಂಬಿ ಹರಿದ ಪರಿಣಾಮ ಗ್ರಾಮದಿಂದ ಸಂಪರ್ಕ ಕಳೆದುಕೊಂಡಿದ್ದಾರೆ.

ಹೌದು ! ರೈತಾಪಿ ಜನರ ಬಹುದೊಡ್ಡ ಹಬ್ಬ ಸೀಗೆ ಹುಣ್ಣಿಮೆಗೆ ಭೂಮಿ ತಾಯಿಯ ಪೂಜೆ ಸಲ್ಲಿಸಲು ತರೆಳಿದ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಅಣ್ಣಯ್ಯ ನಂದಯ್ಯನವರ, ಮುಕ್ಕಣ್ಣ ಹಂಚಿನಾಳ ಗ್ರಾಮದಿಂದ ಸಂಪರ್ಕ ಕಳೆದುಕೊಂಡ ಬೇರೆ ಮಾರ್ಗದ ಮೂಲಕ ಊರು ತಲುಪಲು ಮುಂದಾಗಿದ್ದಾರೆ.

ಇತ್ತ ಹಳ್ಳ ತುಂಬಿ ರಭಸದಿಂದ ತುಂಬಿ ಹರಿಯುತ್ತಿರುವ ಕಾರಣ ತಮ್ಮ ಜಮೀನಿಗೆ ತೆರಳಲು ಮಾರ್ಗ ಇಲ್ಲದೆ ರೈತಾಪಿ ಜನ ಜಮೀನಿಗೆ ಪೂಜೆ ಸಲ್ಲಿಸುವ ಬದಲು ಹಳ್ಳದ ದಂಡೆಗೆ ನೀರಿಗೆ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸಿ ಮನೆಗೆ ತೆರಳುವ ದೃಶ್ಯಗಳು ಕಂಡು ಬಂದವು.

ಕಳೆದ ಹಲವು ವರ್ಷಗಳಿಂದ ಸೊಟ್ಟ ಹಳ್ಳಕ್ಕೆ ಬ್ರಿಡ್ಜ್ ನಿರ್ಮಾಣ ಆಗದೆ ಇರುವುದು ರೈತಾಪಿ ಜನರನ್ನೂ ಈ ದುಸ್ಥಿತಿ ತಂದೊಡ್ಡಿದೆ ಎಂದು ರೈತ ಬಸವರಾಜ ಅಭಿಪ್ರಾಯ ವ್ಯಕ್ತಪಡಿಸಿದರು.

ಒಟ್ಟಾರೆ ಭೂಮಿ ತಾಯಿಗೆ ಉಡಿ ತುಂಬುವ ಹಬ್ಬಕ್ಕೆ ಬೆಂಬಿಡದೆ ಕಾಡುವ ಮಳೆ ಮತ್ತು ಹಳ್ಳ ಅಡ್ಡಗಟ್ಟಿದ ಪರಿಣಾಮ ರೈತಾಪಿ ಸಮೂಹ ಹಳ್ಳಕ್ಕೆ ಪೂಜೆ ಸಲ್ಲಿಸಿ ಮನೆಗೆ ಮರಳಿರುವುದು ರೈತ ವಲಯದಲ್ಲಿ ಬೇಸರ ಎನಿಸಿದೆ.

ಹಳ್ಳದ ಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರ ಜಮೀನುಗಳ ಬೆಳೆಗೂ ನೀರು ನುಗ್ಗುತ್ತಿದೆ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Suman K
Kshetra Samachara

Kshetra Samachara

17/10/2024 01:29 pm

Cinque Terre

31.71 K

Cinque Terre

0

ಸಂಬಂಧಿತ ಸುದ್ದಿ