ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಆಹಾರ ಜಾಗೃತಿ ಅಭಿಯಾನ - 2024 ಸಾಧಕ ಕೃಷಿಕರಿಗೆ ಗೌರವ

ಮುಲ್ಕಿ: ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನ ವಿಕಾಸ ಸಮಿತಿ ಸಹಕಾರದಲ್ಲಿ ವಿಶ್ವ ಆಹಾರ ದಿನಾಚರಣೆ ಪ್ರಯುಕ್ತ ಆಹಾರ ಜಾಗೃತಿ ಅಭಿಯಾನ- 2024 ಹಾಗೂ ಸಾಧಕ ಕೃಷಿಕರಿಗೆ ಗೌರವ ಕಾರ್ಯಕ್ರಮ ಪಕ್ಷಿಕೆರೆ ಸಮೀಪದ ಪಂಜ ಬೈಲಗುತ್ತು ಮನೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿ ಮಾತನಾಡಿ ಹಣವನ್ನು ತಿನ್ನಲಾಗದು. ಅನ್ನವನ್ನಷ್ಟೇ ತಿನ್ನಬಹುದು. ಇದನ್ನು ಬೆಳೆಸುವ ಕೃಷಿಕರನ್ನು ಪ್ರೋತ್ಸಾಹಿಸಬೇಕು. ಕೃಷಿಯೆಂದರೆ ಸಮಾಜ ಸೇವೆಯೂ ಹೌದು. ಸರಕಾರಗಳು ಕೃಷಿಕರ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಅವರಿಗೆ ಬೇಕಾದ ಸಹಕಾರ ನೀಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಪಂಜ ಕೊಯ್ಕುಡೆ ಶ್ರೀ ವಿಠೋಬ ಭಜನಾ ಮಂದಿರದ ಅಧ್ಯಕ್ಷ ಕರುಣಾಕರ ಶೆಟ್ಟಿ ಪಂಜಗುತ್ತು ನಂದಿನಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಟಿ ಶೆಟ್ಟಿ ನಲ್ಯಗುತ್ತು, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವ ಪ್ರಸಾದ್ ಪುನರೂರು, ಜನವಿಕಾಸ ಸಮಿತಿ ಮುಲ್ಕಿ ಘಟಕದ ಅಧ್ಯಕ್ಷ ಶಶಿಕರ ಕೆರೆಕಾಡು ,ಮಾಜೀ ಅಧ್ಯಕ್ಷೆ ಶೋಭಾ ರಾವ್, ಸದಸ್ಯರಾದ ಜಿತೇಂದ್ರ ವಿ ರಾವ್, ಅಕ್ಷತಾ ಶೆಟ್ಟಿ, ನೀತಾ ಶೆಟ್ಟಿ, ಆನಂದ ಮೇಲಾಂಟ ಮತ್ತಿತರರು ಉಪಸ್ಥಿತರಿದ್ದರು.

ದೇವಪ್ರಸಾದ್ ಪುನರೂರು ಸ್ವಾಗತಿಸಿದರು, ,ಪ್ರಧಾನ ಕಾರ್ಯದರ್ಶಿ ಗೀತಾ ಶೆಟ್ಟಿ, ಧನ್ಯವಾದ ಅರ್ಪಿಸಿದರು ಜಿತೇಂದ್ರ ವಿ ರಾವ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೃಷಿ ರತ್ನ 2024ರ ಪ್ರಶಸ್ತಿಯನ್ನು ಕೃಷಿ ಕ್ಷೇತ್ರದ ಸಾಧಕ ,ಸಮಾಜ ಸೇವಕ, ಹವ್ಯಾಸಿ ಭಾಗವತ ಸತೀಶ್ ಶೆಟ್ಟಿ ಬೈಲಗುತ್ತು ರವರಿಗೆ ನೀಡಿ ದಂಪತಿ ಸಮೇತ ಗೌರವಿಸಿ ಸನ್ಮಾನಿಸಲಾಯಿತು.

Edited By : Manjunath H D
Kshetra Samachara

Kshetra Samachara

16/10/2024 09:25 pm

Cinque Terre

2.83 K

Cinque Terre

0

ಸಂಬಂಧಿತ ಸುದ್ದಿ