ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಬಾರಕೂರಿನಲ್ಲಿ 1874ನೇ ಮದ್ಯವರ್ಜನ ಶಿಬಿರ- "ಹೊಸ ಬಾಳಿನತ್ತ ಪಯಣ"

ಬ್ರಹ್ಮಾವರ: ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಬಾರಕೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ರಹ್ಮಾವರ ತಾಲೂಕು, ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಬಾರಕೂರು ರೋಟರಿ ಮತ್ತು ನಾನಾ ಸಂಘ ಸಂಸ್ಥೆಗಳ ಸಹಕಾರದಲ್ಲಿ ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದ ಸಭಾ ಭವನದಲ್ಲಿ 1874ನೇ 8 ದಿನದ ಮದ್ಯವರ್ಜನ ಶಿಬಿರವನ್ನು ಕಚ್ಚೂರು ಮಾಲ್ತಿದೇವಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಗೋಕುಲ್ ದಾಸ್ ಬಾರಕೂರು ಗುರುವಾರ ಉದ್ಘಾಟಿಸಿದರು.

ಅವರು ಈ ಸಂದರ್ಭ ಮಾತನಾಡಿ, ಪ್ರಪಂಚದಲ್ಲಿ ದೇವಾಲಯ ಸೇವಾಲಯವಾಗಿ ರೂಪುಗೊಂಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯ ಎಲ್ಲಾ ದೇವಾಲಯಗಳಿಗೆ ಮಾದರಿಯಾಗಿದೆ. ಸರಕಾರ ಮಾಡಲು ಅಸಾಧ್ಯವಾದ ಅದೆಷ್ಟೋ ಉತ್ತಮ ಕಾರ್ಯಗಳನ್ನು ಮಾಡುತ್ತಿರುವ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಸಂಸ್ಥೆಯಿಂದ ನಡೆಯುತ್ತಿರುವ ಮದ್ಯವರ್ಜನ ಶಿಬಿರ ಅದೆಷ್ಟೋ ಕುಟುಂಬಗಳನ್ನು ಉಳಿಸಿದೆ ಎಂದರು.

ಸಮಿತಿಯ ಗೌರವಾಧ್ಯಕ್ಷ ಉಮೇಶ್ ಆಚಾರ್ಯ, ಕೆ.ಬಾಬು ನಾಯ್ಕ್, ಶ್ರೀನಿವಾಸ ಉಡುಪ, ರಮೇಶ್ ಭಟ್, ಶೇಡಿಕೊಡ್ಲು ವಿಠಲ ಶೆಟ್ಟಿ, ಗಣೇಶ್ ಶೆಟ್ಟಿ, ಲಕ್ಷ್ಮಣ್ ನಾಯ್ಕ್, ರಮೇಶ್ ಪಿ.ಕೆ., ಅಚ್ಯುತ ಪೂಜಾರಿ, ಗೌರಿ ಪೂಜಾರಿ, ಫಿಲೋಮಿನಾ ಡಿಸೋಜ, ಶಿಬಿರಾಧಿಕಾರಿ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Edited By : Shivu K
PublicNext

PublicNext

17/10/2024 04:14 pm

Cinque Terre

20.64 K

Cinque Terre

0

ಸಂಬಂಧಿತ ಸುದ್ದಿ