ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ದೇಶ ಭಕ್ತಿ ಸೈನಿಕರಿಗೆ ಮಾತ್ರವಲ್ಲ, ಎಲ್ಲರಲ್ಲೂ ಇರಬೇಕು

ಬ್ರಹ್ಮಾವರ: ಬಾರ್ಕೂರು ಹನೆಹಳ್ಳಿ ಕೋಟಿ ಚೆನ್ನಯ್ಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬ್ರಹ್ಮಾವರದ ರೋಯಲ್‌ ರೋಟರಿ, ಬ್ರಹ್ಮಾವರದ ನರೇನ್‌ ಅಕಾಡೆಮಿ, ಜಯಂಟ್ಸ್‌ ಗ್ರುಪ್‌ನ ಜಂಟಿ ಆಶ್ರಯದಲ್ಲಿ ವಿಶೇಷ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಭಾರತೀಯ ಜೀವ ವಿಮಾ ನಿಗಮನದ ನಿವೃತ್ತ ಅಧಿಕಾರಿ ಎನ್.ವಿ ಕಾಮತ್ ಗುರುವಾರ ಚಾಲನೆ ನೀಡಿದರು.

ಅವರು ಈ ಸಂದರ್ಭ ಮಾತನಾಡಿ ಇಸ್ರೇಲ್ ದೇಶದಂತೆ ಪ್ರತಿಯೊಬ್ಬರೂ ಸೇನೆಯಲ್ಲಿ ಕಾರ್ಯ ನಿರ್ವಹಿಸುವ ಮನೋಭಾವ ಭಾರತೀಯರಲ್ಲೂ ಇರಬೇಕು. ದೇಶ ಪ್ರೇಮ ಸೈನ್ಯ ಸೇರಿದವರು ಮಾತ್ರ ಅಲ್ಲ ಎಲ್ಲರಲ್ಲೂ ಇರಬೇಕು ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಡುಪಿ ಜಿಲ್ಲಾ ಅಧಿಕಾರಿ ಹಾಕಪ್ಪ ಆರ್‌ ಲಮಾಣಿ, ತಾಲ್ಲೂಕು ಅಧಿಕಾರಿ ಶುಭಾ ಜನಾರ್ಧನ್, ಸೇನಾ ಶಾಲೆಯ ಮುಖ್ಯಸ್ಥ ಸುಬೇದಾರ್‌ ಜನಾರ್ಧನ, ನರೇನ್‌ ಅಕಾಡೆಮಿಯ ಚಂದ್ರಕಾಂತ್, ಜಯಂಟ್ಸ್‌ನ ಮಿಲ್ಟನ್ ಒಲಿವೆರಾ, ಪ್ರತಿಭಾ, ವಿವೇಕಾನಂದ ಕಾಮತ್, ರೋಯಲ್‌ ರೋಟರಿಯ ಗಣೇಶ, ತ್ರಿವಿಕ್ರಮ ಅಡಿಗ ಉಪಸ್ಥಿತರಿದ್ದರು.

ಬಾರಕೂರು ಹನೆಹಳ್ಳಿ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯಲ್ಲಿ ಇದೀಗ 4ನೇ ತಂಡವಾಗಿದ್ದು 100 ಅಗ್ನಿವೀರರು ತರಬೇತಿ ಪಡೆಯುತ್ತಿದ್ದು ಹಲವಾರು ಯುವಕರು ಸೇನೆಗೆ ಆಯ್ಕೆಗೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

17/10/2024 07:13 pm

Cinque Terre

1.71 K

Cinque Terre

0

ಸಂಬಂಧಿತ ಸುದ್ದಿ