ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೃಷ್ಣಮಠದಲ್ಲಿ 100 ಭರತನಾಟ್ಯ ಕಲಾವಿದರಿಂದ ನೃತ್ಯ ಪ್ರದರ್ಶನ- ಪರ್ಯಾಯ ಶ್ರೀಗಳಿಂದ ಚಾಲನೆ

ಉಡುಪಿ: ಅಭಿಘ್ನ ನೃತ್ಯಾಲಯಂ ಸಂಸ್ಥೆ ವತಿಯಿಂದ ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪುತ್ತಿಗೆ ಮಠದ ಸಹಯೋಗದೊಂದಿಗೆ ಶ್ರೀಕೃಷ್ಣಮಠದ ಮಧ್ವಮಂಟದಲ್ಲಿ ಹಾಗೂ ರಾಜಾಂಗಣದಲ್ಲಿ ಬುಕ್ ಆಫ್ ರೆಕಾರ್ಡ್ ದಾಖಲೆಗಾಗಿ 100 ಮಂದಿ 14 ಗಂಟೆಗಳ ನಿರಂತರ ಭರತನಾಟ್ಯ ಕಾರ್ಯಕ್ರಮಕ್ಕೆ ಪರ್ಯಾಯ ಪುತ್ತಿಗೆ ಶ್ರೀಗಳು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಹೈದರಬಾದ್, ಚೆನ್ನೈ, ವಿಜಯವಾಡ, ಬೆಂಗಳೂರು ಸಹಿತ ವಿವಿಧ ಭಾಗಗಳ ಐದು ವರ್ಷದಿಂದ 60 ವರ್ಷದವರೆಗಿನ ಭರತನಾಟ್ಯ ಕಲಾವಿದರು ಭಾಗವಹಿಸಿದರು. ನಿರಂತರ 14 ಗಂಟೆಗಳ ಕಾಲ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್‌ ದಾಖಲೆಗಾಗಿ ಈ ನೃತ್ಯವನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆೆಯಿಂದ ಸಂಜೆವರೆಗೆ ಮಧ್ವಮಂಟಪದಲ್ಲಿ ಹಾಗೂ ಸಂಜೆ ಬಳಿಕ ರಾಜಾಂಗಣದಲ್ಲಿ ನೃತ್ಯ ಪ್ರದರ್ಶನ ನಡೆಯಿತು.

Edited By : PublicNext Desk
Kshetra Samachara

Kshetra Samachara

17/10/2024 08:03 pm

Cinque Terre

652

Cinque Terre

0

ಸಂಬಂಧಿತ ಸುದ್ದಿ