ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ; ರಸ್ತೆ ವಿಚಾರಕ್ಕೆ ಮಹಿಳೆಯರ ಮೇಲೆ ಹಲ್ಲೆ ಮಾಡಿದ ರೈಲ್ವೇ ಸಿಬ್ಬಂದಿ, ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಹುಬ್ಬಳ್ಳಿ: ಮನೆಯ ಮುಂದಿನ ರಸ್ತೆ ವಿಚಾರಕ್ಕೆ ರೈಲ್ವೇ ಸಿಬ್ಬಂದಿ ಸೇರಿಕೊಂಡು ಕಟ್ಟಿಗೆ ಮೂಲಕ ಹೆಣ್ಣು ಮಕ್ಕಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿ ಗದಗ ರಸ್ತೆಯ ಸುಂದರಂ ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ರೈಲ್ವೇ ಸಿಬ್ಬಂದಿಗಳಾದ ಗಾಬ್ರೇಲ್,ರಾಧಾ,ಜೋಶೇಫ್ ಎಂಬುವರು ಸೇರಿಕೊಂಡು ವೆಸ್ಲಿ ಮತ್ತು ರಿಚರ್ಡ್ ಎಂಬುವರ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿದ ಪರಿಣಾಮ ವೆಸ್ಲಿ ಮತ್ತು ರಿಚರ್ಡ್ ಎಂಬುವರು ಗಾಯಗೊಂಡಿದ್ದು ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಗಾಬ್ರೇಲ್,ರಾಧಾ,ಹಾಗೂ ಜೋಶೇಫ್ ಎನ್ನುವರು ಹಲ್ಲೆ ನಡೆಸಿದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಕುರಿತು ಹಲ್ಲೆಗೊಳಗಾದ ವೆಸ್ಲಿ ಮತ್ತು ರಿಚರ್ಡ್ ಕೇಶ್ವಾಪುರ ಪೊಲೀಸ್ ಠಾಣೆಗೆ ದೂರು ನೀಡಿದರೂ ಕೂಡಾ ಪೊಲೀಸರು ನಮ್ಮ ದೂರಿಗೆ ಸ್ಪಂದನೆ ಮಾಡುತ್ತಿಲ್ಲವೆಂದು ಆರೋಪಿಸಿದ್ದಾರೆ.

ವಿನಯ ರೆಡ್ಡಿ, ಕ್ರೈಂ ಬ್ಯುರೋ, ಪಬ್ಲಿಕ್ ನೆಕ್ಸ್ಟ್

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/10/2024 02:59 pm

Cinque Terre

60.41 K

Cinque Terre

4

ಸಂಬಂಧಿತ ಸುದ್ದಿ