ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ, ಲಕ್ಷಾಂತರ ಮೌಲ್ಯದ ಅಕ್ರಮ ಚಿನ್ನಾಭರಣ ಸೀಜ್

ಹುಬ್ಬಳ್ಳಿ: ಬೇರೆ ರಾಜ್ಯದಿಂದ ದಾಖಲೆಗಳು ಇಲ್ಲದೆ ಚಿನ್ನವನ್ನು ತಂದು ಅವಳಿ ನಗರದಲ್ಲಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಎಸಿಪಿ ಒಡೆಯರ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಗಂಗೇನಹಳ್ಳಿ ತಂಡ ದಾಳಿಯನ್ನು ಮಾಡಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಸೀಜ್ ಮಾಡಿದ್ದಾರೆ.

ಮಹಾರಾಷ್ಟ್ರದಿಂದ ಖಾಸಗಿ ಬಸ್'ನ ಮುಖಾಂತರ ಚಿನ್ನ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿಯನ್ನು ಆಧರಿಸಿ ಧಾರವಾಡದ ಎಸ್ ಡಿ ಎಂ ಕಾಲೇಜು ಬಳಿಯಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ ಅಭಿಷೇಕ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದಾಖಲೆಗಳು ಇಲ್ಲದೇ ಸಾಗಿಸುತ್ತಿದ್ದ 1 ಕೆಜಿಗೂ ಅಧಿಕ ಚಿನ್ನ ಹಾಗೂ 1 ಕೆಜಿ ಅಧಿಕ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಅಂತಾ ಡಿಸಿಪಿ ನಂದಗಾವಿ ಹೇಳಿದ್ದಾರೆ.

ಬೈಟ್:ಡಿಸಿಪಿ ನಂದಗಾವಿ

ಸದ್ಯ ಅಕ್ರಮ ಚಿನ್ನ ಸಾಗಾಟದ ಆರೋಪದಡಿಯಲ್ಲಿ ಇದೀಗ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಅಭಿಷೇಕ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುವ ವಿದ್ಯಾಗಿರಿ ಪೊಲೀಸರು ಈ ಅಕ್ರಮ ಚಿನ್ನ ಸಾಗಾಟದಲ್ಲಿ ಇನ್ನು ಹಲವರು ಭಾಗಿಯಾಗಿರುವ ಶಂಕೆ ಇದ್ದು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ವಿನಯ ರೆಡ್ಡಿ, ಕ್ರೈಂ ಬ್ಯುರೋ, ಪಬ್ಲಿಕ್ ನೆಕ್ಸ್ಟ್

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/10/2024 07:13 pm

Cinque Terre

68.05 K

Cinque Terre

0

ಸಂಬಂಧಿತ ಸುದ್ದಿ